ಮತ್ತೆ ಕ್ರಿಕೆಟ್ಗೆ ಮರಳಿದ ಪ್ರವೀಣ್ ಕುಮಾರ್
ಮುಂಬೈ: ಉದ್ವೇಗದ ವರ್ತನೆಯಿಂದಾಗಿ ವೃತ್ತಿಪರ ಕ್ರಿಕೆಟ್ನಿಂದ ಅಮಾನತಿಕ್ಕೊಳಗಾಗಿದ್ದ ಪ್ರವೀಣ್ ಕುಮಾರ್ ಅವರು ಮರಳಿ ಕ್ರಿಕೆಟ್ಗೆ ಆಗಮಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಮಾನತು ನಿರ್ಧಾರ ಹಿಂಪಡೆದ ಹಿನ್ನೆಲೆಯಲ್ಲಿ, ಪುನಃ ವೃತ್ತಿಪರ ಕ್ರಿಕೆಟ್ಗೆ ವಾಪಸ್ಸಾಗಿರುವ ಅವರು, ಮಾ. 17ರಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಉತ್ತರ ಪ್ರದೇಶ ತಂಡದಲ್ಲಿ (ಕೇಂದ್ರ ವಲಯದ ತಂಡ) ಪ್ರವೀಣ್ ಆಡಲಿದ್ದಾರೆಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ನಡೆದಿದ್ದ ಕಾರ್ಪೊರೇಟ್ ಟ್ರೋಫಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ಪ್ರವೀಣ್ ಅವರು ಎದುರಾಳಿ ತಂಡದ ಆಟಗಾರನೊಬ್ಬನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಸಮಿತಿಯ ಮುಂದೆ ಪಂದ್ಯದ ರೆಫ್ರಿ ಅವರು ವರದಿ ಸಲ್ಲಿಸಿ, ಪ್ರವೀಣ್ ಅವರು 'ಮಾನಸಿಕವಾಗಿ ಸದೃಢನಾಗಿಲ್ಲ' ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಬಿಸಿಸಿಐ, ಫೆ. 10ರಂದು ಪ್ರವೀಣ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಆನಂತರ, ಬಿಸಿಸಿಐನ ಕ್ಷಮೆ ಕೋರಿದ ಪ್ರವೀಣ್ ಅವರ ಬಗ್ಗೆ ಮೃದು ಧೋರಣೆ ತಳೆದಿದ್ದ ಬಿಸಿಸಿಐ ಅವರ ಅಮಾನತು ಶಿಕ್ಷೆಯನ್ನು ಹಿಂಪಡೆಯಿತು.