ರೊಮಾರಿಯೊ ಬೆಂಬಲ ಕೋರಿದ ಫೀಫಾ
ರಿಯೋ ಡಿ ಜೆನೆರೊ: ಬಹು ನಿರೀಕ್ಷಿತ ಕಾನ್ಫಿಡರೇಷನ್ ಫುಟ್ಬಾಲ್ ಕಪ್ ಪಂದ್ಯಾವಳಿ ಮುಂಬರುವ ಜೂನ್ನಲ್ಲಿ ಆರಂಭವಾಗಲಿದ್ದು, ಈ ಪಂದ್ಯಾವಳಿ ಹಾಗೂ 2014ರ ವಿಶ್ವಕಪ್ ಪಂದ್ಯಾವಳಿ ಆಯೋಜಿಸಲು ಫೀಫಾ ಬಾರ್ಸಿಲೋನಾ ಹಾಗೂ ಬ್ರೆಸಿಲ್ನ ಮಾಜಿ ಆಟಗಾರ ರೊಮಾರಿಯೊ ಬೆಂಬಲವನ್ನು ಕೋರಿದೆ. ಮಾಜಿ ಆಟಗಾರ ರೊಮಾರಿಯೊ ಬ್ರೆಸಿಲ್ನ ಪ್ರವಾಸ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ರೊಮಾರಿಯೊ ಅವರ ಬೆಂಬಲ ಮುಖ್ಯವಾಗಿದೆ.