ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ವಿಜೇಂದರ್, ನಾನೂ ಡ್ರಗ್ಸ್ ತೆಗೆದುಕೊಳ್ತಿದ್ವಿ'

Rashmi Kasaragodu
Updated On : 10 Mar 2013, 1:20 am

ಚಂಡೀಗಢ: ಒಲಿಂಪಿಕ್ಸ್ ಪದಕ ವಿಜೇತ ವಿಜೇಂದರ್ ಸಿಂಗ್ ವಿರುದ್ಧ ಬಂದಿರುವ ಡ್ರಗ್ಸ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ಮುಂದೆ ಹೇಳಿಕೆ ನೀಡಿರುವ ವಿಜೇಂದರ್ ಅವರ ಸ್ನೇಹಿತ ರಾಮ್ ಸಿಂಗ್, ತಾವು ಹಾಗೂ ವಿಜೇಂದರ್ ಇಬ್ಬರೂ ಆಗಾಗ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದುದಾಗಿ ತಿಳಿಸಿದ್ದಾರೆ. ಅಲ್ಲದೇ, ಈ ಮಾದಕ ವಸ್ತುಗಳನ್ನು ವಿಜೇಂದರ್ ಅವರ ಅನಿವಾಸಿ ಭಾರತೀಯ ಸ್ನೇಹಿತ ಅನೂಪ್ ಸಿಂಗ್ ಕಹ್ಲಾನ್ ಅವರು ಒದಗಿಸುತ್ತಿದ್ದರು ಎಂದು ಹೇಳಿದ್ದಾರೆ.
ಪ್ರಕರಣ ಬಯಲಾದ ದಿನವೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ವಿಜೇಂದರ್ ಅವರು, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದ್ದರು. ಆದರೆ, ರಾಮ್ ಸಿಂಗ್ ಹೇಳಿಕೆ ಈಗ ವಿಜೇಂದರ್ ಬಗ್ಗ್ಗೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ರಾಮ್ ಸಿಂಗ್ ತಮ್ಮ ಹೇಳಿಕೆಯಲ್ಲಿ ಹೆಸರಿಸುತ್ತಿರುವ ಅನೂಪ್ ಸಿಂಗ್, ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರ ಬಂಧನದಲ್ಲಿದ್ದಾರೆ. ಶನಿವಾರ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ಮೂಲಗಳು ಹೇಳಿವೆ.
ಏತನ್ಮಧ್ಯೆ, ವಿಜೇಂದರ್, ರಾಮ್ಸಿಂಗ್ಗೆ ಸೇರಿದ ಕ್ರೀಡಾ ಹಾಸ್ಟೆಲ್ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement