ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶರಣ್- ಪುರವ ಜೋಡಿಗೆ ಪ್ರಶಸ್ತಿ

Mainashree
Updated On : 9 Mar 2013, 11:02 am

ನವದೆಹಲಿ: ಭಾರತದ ಟೆನಿಸ್ ತಾರೆಗಳಾದ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ ಋತುವಿನ ಮೊದಲ ಎಟಿಪಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕ್ಯೊಟೊದಲ್ಲಿ ನಡೆದ ಶಿಮಾಜು ಆಲ್ ಜಪಾನ್ ಟೆನಿಸ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ದಿವಿಜ್ ಮತ್ತು ಪುರವ ಜೋಡಿ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕ್ರಿಸ್ ಗುಸೀಯನ್ ಮತ್ತು ಮ್ಯಾಟ್ ರೈಡ್ ಜೋಡಿಯನ್ನು 6-4, 7-5 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇದಕ್ಕೂ ಮುನ್ನ ದಿವಿಜ್ ಮತ್ತು ಪುರವ ಜೋಡಿ ಸಿಯೋಲ್ (2011) ಮತ್ತು ಲಾಫ್ಬರ್ಗ್ (2012) ಪಂದ್ಯಾವಳಿಗಳಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದರು.
ಎಡಗೈ ಆಟಗಾರ ದಿವಿಜ್ ಮತ್ತು ಪುರವ ಮೊದಲ ಸೆಟ್ನಲ್ಲಿ ಎದುರಾಳಿಗಳನ್ನು ಸುಲಭವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ, ತೀವ್ರ ಪೈಪೋಟಿಯಿಂದ ನಡೆದ 2ನೇ ಸೆಟ್ನ ಒಂದು ಹಂತದಲ್ಲಿ ಭಾರತದ ಜೋಡಿ 3-5 ಅಂತರದಿಂದ ಹಿನ್ನಡೆ ಅನುಭವಿಸಿತ್ತು. ಆದರೆ, ನಂತರ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.
ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತದ ಜೋಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ವಿಜಯದೊಂದಿಗೆ ಇಬ್ಬರೂ ಆಟಗಾರರು ತಲಾ 80 ಅಂಕಗಳನ್ನು ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement