ನಾಡಾದಿಂದ ವಿಜೇಂದರ್ ಪರೀಕ್ಷೆ ಇಲ್ಲ
ನವದೆಹಲಿ: ಮಾದಕ ವಸ್ತು ಸೇವಿಸಿದ್ದಾರೆ ಎನ್ನಲಾಗಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ರಾಷ್ಟ್ರೀಯ ಡೋಪಿಂಗ್ ನಿಗ್ರಹ ಸಂಸ್ಥೆ (ನಾಡಾ) ಪರೀಕ್ಷಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
'ವಿಶ್ವ ಡೋಪಿಂಗ್ ಸಂಸ್ಥೆಯ ನೀತಿ ಸಂಹಿತೆಯ ಪ್ರಕಾರ ಅಥ್ಲೀಟ್ಗಳು ಮಾದಕ ವಸ್ತು ಸೇವಿಸಿದ್ದಾರಾ? ಎಂದು ಕಂಡು ಹಿಡಿಯಲು ಎರಡು ಮಾದರಿಯ ಪರೀಕ್ಷೆಗಳಿವೆ. ಸ್ಪರ್ಧೆ ನಡೆದಾಗ ಮತ್ತು ಸ್ಪರ್ಧೆ ಇಲ್ಲದಿರುವಾಗ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸ್ಪರ್ಧೆ ನಡೆದ ಸಂದರ್ಭದಲ್ಲಿ ಹೆರಾಯನ್ ಸೇವಿಸಿದ್ದಾರಾ? ಎಂದು ಪರೀಕ್ಷಿಸುತ್ತೇವೆ. ಹಾಗಾಗಿ ನಾವು ಈಗ ವಿಜೇಂದರ್ ಪರೀಕ್ಷೆಗೊಳಪಡಿಸುವುದಿಲ್ಲ. ಇದೊಂದು ಕಾನೂನುಬಾಹಿರ ಪ್ರಕರವಾಗಿದ್ದು, ವಿಜೇಂದರ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ' ಎಂದಿದೆ ನಾಡಾ.