ಮೊಹಾಲಿ ಟೆಸ್ಟ್ಗೆ ವೇಡ್ ಅನುಮಾನ
ಚಂಡಿಗಡ: ಭಾರತ ಪ್ರವಾಸದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆತಂಕ ಎದುರಾಗಿದೆ.
ಆಸೀಸ್ನ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ತಮ್ಮ ಹಿಮ್ಮಡಿಗೆ ಗಾಯ ಮಾಡಿಕೊಂಡಿದ್ದು, ಮೊಹಾಲಿಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಶನಿವಾರ ಬ್ಯಾಸ್ಕೆಟ್ಬಾಲ್ ಆಡುವ ವೇಳೆ ವೇಡ್ ಗಾಯಗೊಂಡಿದ್ದಾರೆ. ವೇಡ್ ಈಗ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ಗೆ ಒಳಗಾಗಿದ್ದು ಈಗಲೇ ಅವರ ಸ್ಥಿತಿಯ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಆಸೀಸ್ ತಂಡದ ಮಾಧ್ಯಮ ವ್ಯವಸ್ಥಾಪಕ ಮ್ಯಾಟ್ ಸೆನಿನ್ ತಿಳಿಸಿದ್ದಾರೆ.