ವೆಲ್ಸ್ ಮಾಸ್ಟರ್ಸ್‌ನಲ್ಲಿ ಭಾರತದ ಸವಾಲು ಅಂತ್ಯ
ಇಂಡಿಯನ್ ವೇಲ್ಸ್: ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಎಟಿಪಿ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಭಾರತದ ಆಟಗಾರರಾದ ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಜಾ ಮೊದಲ ಸುತ್ತಿನ ಪಂದ್ಯಗಳಲ್ಲೇ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಕೆನಡಾದ ಡೇನಿಯಲ್ ನೆಸ್ಟರ್ ಜೊತೆ ಕಣಕ್ಕಿಳಿದಿದ್ದ ಭೂಪತಿ, ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಫೆಲಿಸಿಯಾನೊ ಲೋಪೆಜ್ ಹಾಗೂ ಕೆನಡಾದ ಮೈಲೋಸ್ ರೋನಿಕ್ ಜೋಡಿ ವಿರುದ್ಧ 4-6, 6-7 (4) ಅಂತರದಲ್ಲಿ ಸೋತರು. ಮಹಿಳೆಯರ ಡಬಲ್ಸ್‌ನ ಸಾನಿಯಾ ಮಿರ್ಜಾ ಹಾಗೂ ಅಮೆರಿಕಾದ ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಜೋಡಿ, ಅಮೆರಿಕಾದ ಲೀಸಾ ರೇಮಂಡ್ ಹಾಗೂ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ಜೋಡಿ ವಿರುದ್ಧ 7-6 (8), 3-6, 6-10 ಅಂತರದಲ್ಲಿ ಪರಾಭವಗೊಂಡರು.