'ಸಚಿನ್ ಫುಟ್‌ಬಾಲ್‌ನ ಮರಡೊನಾ, ಪೀಲೆಗೆ ಸಮ'
ನವದೆಹಲಿ: ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ದಕ್ಷಿಣ ಆಫ್ರಿಕಾ ಖ್ಯಾತ ಮಾಜಿ ವೇಗಿ ಅಲನ್ ಡೊನಾಲ್ಡ್, ಫುಟ್ಬಾಲ್ ದಂತಕತೆಗಳಿಗೆ ಹೋಲಿಸಿದ್ದಾರೆ. ವಿಮಲ್ ಕುಮಾರ್ ಎಂಬುವರು ಬರೆದಿರುವ 'ಸಚಿನ್ ಕ್ರಿಕೆಟರ್ ಆಫ್ ದ ಸೆಂಚುರಿ' ಎಂಬ ಪುಸ್ತಕದಲ್ಲಿ ಸಚಿನ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಡೊನಾಲ್ಡ್, ಫುಟ್ಬಾಲ್‌ನ ತಾರೆಗಳಾದ ಮರಡೋನಾ ಮತ್ತುಪೀಲೆ ಫುಟ್ಬಾಲ್ ದಂತಕತೆಗಳಾದರೆ, ಸಚಿನ್ ಕ್ರಿಕೆಟ್‌ನಲ್ಲಿ ಅವರಿಬ್ಬರಿಗೂ ಸಮವಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಚಿನ್ ಆಕರ್ಷಣೆ ಮೈದಾನದಿಂದ ಹೊರಗೆ ಸಾಗಿದೆ. ಸಚಿನ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಾಗ ಈ ಕ್ರೀಡೆ ಬಡವಾಗಲಿದೆ ಎಂದು ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ.