ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಹ್ವಾಗ್ ಕೊಕ್‌ಗೆಧೋನಿ ಮಾತು ನಡೆದಿದೆ: ಸೌರವ್

Mainashree
Updated On : 10 Mar 2013, 11:26 am

ಕೊಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್‌ಗೆ ವೀರೇಂದ್ರ ಸೆಹ್ವಾಗ್ ಕೊಕ್ ನೀಡಿದ್ದೆ ಗಂಗೂಲಿ ಅಚ್ಚರಿ ವ್ಯಕ್ತಪಡಸಿದ್ದಾರೆ.
ಆಸೀಸ್ ವಿರುದ್ಧದ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಬ್ಯಾಟ್ಸ್‌ಮನ್ ಸೆಹ್ವಾಗ್ ಕೈಬಿಟ್ಟಿರುವಆಯ್ಕೆ ಸಮಿತಿ ನಿರ್ಧಾರದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಮಾತು ನಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಧೋನಿಯ ಅಭಿಪ್ರಾಯವನ್ನು ಪರಿಗಣಿಸಿಲ್ಲ ಎಂದು ಊಹಿಸಿಕೊಳ್ಳಬಾರದು. ಒಂದು ವೇಳೆ ತಂಡದ ನಾಯಕ ಒಬ್ಬ ಆಟಗಾರನ ಬಗ್ಗೆ ಆಯ್ಕೆ ಸಮಿತಿಗೆ ತಿಳಿಸಿದರೆ, ಆಯ್ಕೆ ಸಮಿತಿ ಇಲ್ಲ ಎಂದು ಹೇಳುವುದು ಕಷ್ಟ. ಹೀಗಾಗಿ ಧೋನಿ ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗಿಯಾಗದಿದ್ದರೂ, ಆಯ್ಕೆ ಸಮತಿ ಧೋನಿಯ ಅಭಿಪ್ರಾಯವನ್ನು ಪಡೆದುಕೊಂಡಿದೆ ಎಂಬುದು ನನ್ನ ನಂಬಿಕೆ ಎಂದು ಗಂಗೂಲಿ ತಿಳಿಸಿದ್ದರು. ಗಂಗೂಲಿ ಸ್ಪಷ್ಟನೆ: ಶನಿವಾರ ಸೆಹ್ವಾಗ್ ಅವರನ್ನು ಆಯ್ಕೆ ಮಂಡಳಿ ತಂಡದಿಂದ ಕೈಬಿಟ್ಟಿರುವ ನಿರ್ಧಾರದ ಹಿಂದೆ ಧೋನಿಯ ಕೈವಾಡ ಇದೆ ಎಂದು ತಿಳಿಸಿದ್ದ ಮಾಜಿ ನಾಯಕ ಗಂಗೂಲಿ, ಭಾನುವಾರ ತಮ್ಮ ವಾದವನ್ನು ಬದಲಿಸಿ ಸೆಹ್ವಾಗ್ ಅವರನ್ನು ಕೈಬಿಟ್ಟಿರುವ ನಿರ್ಧಾರದ ಹಿಂದೆ ಧೋನಿಯೇ ಕಾರಣ ಎಂದು ನೇರವಾಗಿ ತಿಳಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement