ದೇವಧರ ಕ್ರಿಕೆಟ್ ಟ್ರೋಫಿ: ಫೈನಲ್ ಲಗ್ಗೆ ಹಾಕಿದ ಉತ್ತರ ವಲಯ
ಗುವಾಹತಿ: ಯುವರಾಜ್ ಸಿಂಗ್ (77) ಮತ್ತು ಪ್ರತಿಭಾನ್ವಿತ ಬ್ಯಾಟ್ಸ್ಮನ್ ಉನ್ಮುಕ್ತ್ ಚಾಂದ್ (56) ಗಳಿಸಿದ ಅರ್ಧ ಶತಕದ ನೆರವಿನೊಂದಿಗೆ ಉತ್ತರ ವಲಯ, ಕೇಂದ್ರ ವಲಯದ ವಿರುದ್ಧ 8 ವಿಕೆಟ್ ಅಂತರದಿಂದ ಜಯ ಸಾಧಿಸುವ ಮೂಲಕ ದೇವಧರ್ ಟ್ರೋಫಿಯ ಫೈನಲ್ ಪ್ರವೇಶಿಸಿದೆ.
ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಉತ್ತರ ವಲಯದ ಪರ, ಆಕರ್ಷಕ ಪ್ರದರ್ಶನ ನೀಡಿದ ತಂಡದ ಬೌಲರ್ಗಳು ಕೇಂದ್ರವನ್ನು 41.5 ಓವರ್ಗಳಲ್ಲಿ 190 ರನ್ಗಳಿಗೆ ಕಟ್ಟಿ ಹಾಕಿದರು.
ನಂತರ ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಉತ್ತರ ವಲಯಕ್ಕೆ 33 ಓವರ್ಗಳಲ್ಲಿ 160 ರನ್ಗಳ ಗುರಿ ನೀಡಲಾಯಿತು. ಕೇಂದ್ರ ವಲಯದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಉತ್ತರ ವಲಯ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು 160 ರನ್ ಪೇರಿಸಿ ಜಯ ಕಂಡುಕೊಂಡಿತು.
ಯುವರಾಜ್ ಸಿಂಗ್ ಮತ್ತು ಉನ್ಮುಕ್ತ್ ಚಾಂದ್ ಜತೆಯಾಟದಲ್ಲಿ 129 ರನ್ ಗಳಿಸಿ ತಂಡದ ಜಯದ ರೂವಾರಿಗಳೆನಿಸಿದರು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯದ ವಿರುದ್ಧ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡವನ್ನು ಉತ್ತರ ವಲಯ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.