ಪುಣೆಯಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ
ನವದೆಹಲಿ: ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ಆತಿಥ್ಯವನ್ನು ಪುಣೆ ನಗರ ವಹಿಸಿಕೊಳ್ಳಲಿದೆ. ಪಂದ್ಯಾವಳಿ ಮೇ 28ರಿಂದ ಜೂನ್ 10ರವರೆಗೆ ನಡೆಯಲಿದೆ. ಇನ್ನು ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ಲಖ್ನೌದಲ್ಲಿ ಏಪ್ರಿಲ್ 30ರಿಂದ ನಡೆಯಲಿದೆ ಎಂದು ಸೋಮವಾರ ಹಾಕಿ ಇಂಡಿಯಾ ಪ್ರಕಟಿಸಿದೆ.
ರಾಷ್ಟ್ರೀಯ ಪಂದ್ಯಾವಳಿಯ ಪಂದ್ಯಗಳ ಸ್ಥಳ ಮತ್ತು ದಿನಾಂಕದೊಂದಿಗೆ, ಪ್ರಸಕ್ತ ವರ್ಷ ನಡೆಯಲಿರುವ ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ ವೇಳಾಪಟ್ಟಿಯನ್ನೂ ಹಾಕಿ ಇಂಡಿಯಾ ಪ್ರಕಟಿಸಿದೆ.
ರೋಹ್ತಕ್ನಲ್ಲಿ ಮೇ 27ರಿಂದ ಜೂನ್ 6ರ ವರೆಗೆ ಬಾಲಕರ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಯಲಿದೆ. ಇನ್ನು ಏಪ್ರಿಲ್ 19ರಿಂದ ಮೇ 1ರ ವರೆಗೆ ರಾಂಚಿಯಲ್ಲಿ ಬಾಲಕಿಯರ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಯಲಿದೆ.