ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲಂಕೆಗೆ ಬಾಂಗ್ಲಾ ಸೆಡ್ಡು; ಡ್ರಾದತ್ತ ಗಾಲೆ ಟೆಸ್ಟ್

Mainashree
Updated On : 11 Mar 2013, 11:36 am

ಗಾಲೆ: ಮಷ್ಫೀಕರ್ ರಹೀಂ ಅವರ ಚೊಚ್ಚಲ ದ್ವಿಶತಕ ಹಾಗೂ ಮಧ್ಯಮ ಕ್ರಮಾಂಕದ ನಾಸಿರ್ ಹುಸೇನ್ ಅವರ ಶತಕದ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ, ಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 638 ರನ್‌ಗಳ ದೊಡ್ಡ ಮೊತ್ತ ಪೇರಿಸಿದೆ.
ಬಾಂಗ್ಲಾ ಇನಿಂಗ್ಸ್ ನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಲಂಕಾ ಪಡೆ, ದಿನಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. ಆರಂಭಿಕ ಕರುಣಾರತ್ನೆ (3) ಪೆವಿಲಿಯನ್ ಸೇರಿದ್ದಾರೆ. ದಿನಾಂತ್ಯಕ್ಕೆ ಮತ್ತೊಬ್ಬ ಆರಂಭಿಕ ದಿಲ್ಶಾನ್ (63), ಸಂಗಕ್ಕಾರ (49) ಕ್ರೀಸ್‌ನಲ್ಲಿದ್ದಾರೆ.
ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಲಂಕಾ ಗಳಿಸಿದ್ದ 540 ರನ್‌ಗಳಿಗೆ ಉತ್ತರ ನೀಡಲು ಕ್ರೀಸ್‌ಗೆ ಇಳಿದಿದ್ದ ಬಾಂಗ್ಲಾ, ಪಂದ್ಯದ ಮೂರನೇ ದಿನವಾದ ಭಾನುವಾರ 4 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿತ್ತು. ಸೋಮವಾರ ತನ್ನ ಇನಿಂಗ್ಸ್ ಮುಂದುವರೆಸಿದ ಬಾಂಗ್ಲಾ, ನಾಯಕ ಮಷ್ಫೀಕರ್ ರಹೀಂ ದ್ವಿಶತಕ ಹಾಗೂ ನಾಸಿರ್ ಹುಸೇನ್ ಶತಕದ ನೆರವಿನಿಂದ 638 ರನ್ ಗಳಿಸಿ ಆಲೌಟ್ ಆಯಿತು.ಹಿರಿಮೆ- ಸಾಧನೆ: ಸೋಮವಾರ ದ್ವಿಶತಕ ದಾಖಲಿಸಿದ ರಹೀಂ ಅವರು ದ್ವಿಶತಕ ಗಳಿಸಿದ ಮೊಟ್ಟ ಮೊದಲ ಬಾಂಗ್ಲಾದೇಶದ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಅಲ್ಲದೇ, ಲಂಕಾ ನೆಲದಲ್ಲಿ ಟೆಸ್ಟ್ ಇನಿಂಗ್ಸ್ ಒಂದರಲ್ಲಿ 600 ರನ್ ಗಡಿ ದಾಟಿದ ಮೂರನೇ ತಂಡವೆಂಬ ಸಾಧನೆಗೂ ಬಾಂಗ್ಲಾದೇಶ ಪಾತ್ರವಾಗಿದೆ. ಈ ಹಿಂದೆ, ಇಲ್ಲಿ ಭಾರತ ಹಾಗೂ ಪಾಕಿಸ್ತಾನ ಈ ಸಾಧನೆ ಮಾಡಿದ್ದವು.
ಸಂಕ್ಷಿಪ್ತ ಸ್ಕೋರ್:
ಲಂಕಾ ಪ್ರಥಮ ಇನಿಂಗ್ಸ್ 570/4 (ಡಿಕ್ಲೇರ್)
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 638/10
ಮಷ್ಫೀಕರ್ 200, ಅಶ್ರಫುಲ್ 190
ಬೌಲಿಂಗ್: ಹೆರಾತ್ 161/2, ಎರಂಗಾ 122/2
ಲಂಕಾ 2ನೇ ಇನಿಂಗ್ಸ್ 116/1 (30 ಓವರ್)
ದಿಲ್ಷಾನ್ ಅ. 63, ಅ. ಸಂಗಕ್ಕಾರ 49
ಬೌಲಿಂಗ್: ಶಹದತ್ ಹುಸೇನ್ 18/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement