ಸೌತ್ ಯುನೈಟೆಡ್ಗೆ ಸೋಲು
ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ಸೋಮವಾರ ಆರಂಭವಾದ 2ನೇ ಡಿವಿಷನ್ ಐ ಲೀಗ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಬೆಂಗಳೂರಿನ ಸೌತ್ ಯುನೈಟೆಡ್ ತಂಡ ಸೋಲು ಅನುಭವಿಸಿದೆ. ಲುವಾಂಗ್ಮುಲ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೌತ್ ಯುನೈಟೆಡ್, 4-3 ಅಂತರದ ಸೋಲು ಕಂಡಿತು.
ಸೌತ್ ಯುನೈಟೆಡ್ ಪರ ಅಮೋ (17ನೇ ನಿಮಿಷ), ಸ್ಟೀಫನ್ 24ನೇ ನಿಮಿಷ) ಹಾಗೂ ಜಯಂತ್ ರಾಜ್ ಬನ್ಶಿ (83ನೇ ನಿಮಿಷ) ಗೋಲು ದಾಖಲಿಸಿದರೆ, ಲುವಾಂಗ್ಮುಲ್ ತಂಡದ ಪರವಾಗಿ, ಚೆಂಕೋ (11ನೇ ನಿಮಿಷ), ಲಾಲ್ರಾವಾಂಗ್ಬಾವ್ಲಾ (20ನೇ ನಿಮಿಷ), ಲಾಲ್ ರುವಾಡಿಕಾ (35ನೇ ನಿಮಿಷ) ಹಾಗೂ ಬಿ. ಝೊರಾಂತಾರಾ (54ನೇ ನಿಮಿಷದಲ್ಲಿ ಗೋಲು ಗಳಿಸಿದರು.
ವಾಸ್ಕೋ-ಸಾಮಿಟಿ ಪಂದ್ಯ ಡ್ರಾ: ಎನ್ಆರ್ಬಿ ವಾಸ್ಕೋ (ಗೋವಾ) ಹಾಗೂ ದಕ್ಷಿಣ ಸಾಮಿಟಿ ತಂಡಗಳ ನಡುವೆ ನಡೆದ ದಿನದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಇತ್ತಂಡಗಳೂ ತಲಾ ಒಂದು ಗೋಲು ದಾಖಲಿಸಿದವು..
ವಾಸ್ಕೋ ಪರವಾಗಿ ಇಮ್ಯಾನ್ಯುಯೆಲ್ (32ನೇ ನಿಮಿಷ) ಹಾಗೂ ಸಾಮಿಟಿ ಪರವಾಗಿ ಡೇವಿಡ್ ಕೆ.ಸಿ (47ನೇ ನಿಮಿಷ) ಗೋಲು ದಾಖಲಿಸಿದರು.