ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಆರ್ಚರಿ: ಭಾರತಕ್ಕೆ ಚಿನ್ನ

Mainashree
Updated On : 13 Mar 2013, 12:21 pm

ನವದೆಹಲಿ: ಸ್ಫೂರ್ತಿಯ ಪ್ರದರ್ಶನ ನೀಡಿದ ಸಂದೀಪ್ ಕುಮಾರ್, ಅಭಿಷೇಕ್ ವರ್ಮಾ, ಜಿಗ್ನಾಸ್ ಚಿತ್ತಿಬೊಮ್ಮಾ ಅವರನ್ನೊಳಗೊಂಡಭಾರತದ ಆರ್ಚರಿ ತಂಡ, ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಚರಿ ಗ್ರಾನ್ ಪ್ರಿಕ್ಸ್ ಪಂದ್ಯಾಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಭಾರತ ತಂಡ ಅಂತಿಮ ಸುತ್ತಿನಲ್ಲಿ ವೀಯಟ್ನಾಂ ವಿರುದ್ಧ 226 -218 ಅಂಕಗಳ ಅಂತರದಿಂದ ಜಯ ಸಾಧಿಸಿತು. ನಾಲ್ಕು ಸೆಟ್‌ಗಳಲ್ಲಿ ಭಾರತ 60, 53, 56, 57 ಅಂಕ ಗಳಿಸಿದರೆ, ವೀಯಟ್ನಾಂ 53, 53, 55, 57 ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಜಯ ಕಂಡುಕೊಂಡಿತು.
ಎರಡನೇ ಸೆಟ್ ಟೈ ಆಗಿತ್ತು. ಆದರೆ, ಮೊದಲ ಮತ್ತು 3ನೇ ಸೆಟ್‌ನಲ್ಲಿ ಜಯ ಸಾಧಿಸಿದ ಭಾರತ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 226-212 ಅಂಕಗಳಿಂದ ಜಯ ಸಾಧಿಸಿದ್ದ ಭಾರತ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 234-221 ಅಂಕಗಳಿಂದ ಜಯ ಕಂಡುಕೊಂಡಿತ್ತು.
  ರಿಕರ್ವ್ ತಂಡ ವಿಭಾಗದಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಗೆದ್ದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement