ಡೋಪಿಂಗ್ ಸಂಸ್ಥೆಗೆ ರಕ್ತದ ಮಾದರಿ ನೀಡುತ್ತೇನೆ: ಬಾಕ್ಸರ್ ವಿಜೇಂದರ್ ಸಿಂಗ್
ಮಾದಕ ವಸ್ತು ಹಗರಣದಲ್ಲಿ ತಳಕು ...
ಚಂಡಿಗಡ: ಮಾದಕ ವಸ್ತು ಹಗರಣದಲ್ಲಿ ತಳಕು ಹಾಕಿಕೊಂಡಿರುವ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್ ರಾಷ್ಟ್ರೀಯ ಡೋಪಿಂಗ್ ಸಂಸ್ಥೆ, ತಮ್ಮ ರಕ್ತ ಮತ್ತು ಕೂದಲಿನ ಮಾದರಿ ಪರೀಕ್ಷಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ಡೊಪಿಂಗ್ ಸಂಸ್ಥೆಗೆ ರಕ್ತ ಮತ್ತು ಕೂದಲಿನ ಮಾದರಿಯನ್ನು ನೀಡಲು ಸಮ್ಮತಿಸಿದ್ದಾರೆ. ಆದರೆ, ಪೊಲೀಸರಿಗೆ ರಕ್ತದ ಮಾದರಿಯನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸೋಮವಾರ ವಿಜೇಂದರ್ ಸಿಂಗ್ ವಿಚಾರಣೆ ನಡೆಸಿದ ಪೊಲೀಸರು. ವಿಚಾರಣೆ ನಡೆಸಿದ ಸಂದರ್ಭ ಪಡೆದ ರಕ್ತದ ಮಾದರಿ ಸರಿಯಾಗಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ ವೈದ್ಯರು ಇರಲಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಪಂಜಾಬ್ನಲ್ಲಿ ಪ್ರಕಟಿಸಿದ ಹೇಳಿಕೆಯನ್ನು ವಿಜೇಂದರ್ ಒಪ್ಪಿಕೊಂಡಿಲ್ಲವಂತೆ. ಅಲ್ಲದೆ ಅದನ್ನು ಓದಬೇಡಿ ಎಂದು ಸಹ ವಿಜೇಂದರ್ ಹೇಳಿದ್ದಾರಂತೆ. ಹಗರಣದಲ್ಲಿ ಭಾಗಿಯಾದವರ ಬಗ್ಗೆ ನನಗೇನೂ ಗೊತ್ತಿಲ್ಲವೆಂದು ಎಂದಿದ್ದಾರಂತೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರ ವಶದಲ್ಲಿರುವ ವಿಜೇಂದರ್ ಆಪ್ತ ಸ್ನೇಹಿತ ರಾಮ್ ಸಿಂಗ್, ಇಬ್ಬರೂ ಮಾದಕ ವಸ್ತು ಸೇವಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಅಲ್ಲದೆ ಪ್ರಕರಣದ ಪ್ರಮುಖ ಆರೋಪಿಯ ನಿವಾಸದ ಬಳಿ ವಿಜೇಂದರ್ ಪತ್ನಿಯ ಕಾರು ಸಹ ಪತ್ತೆಯಾಗಿರುವುದು ಅನುಮಾನ ಉಂಟುಮಾಡಿದೆ.