ನಾಲ್ಕನೇ ಸುತ್ತಿಗೆ ನಡಾಲ್
ಇಂಡಿಯನ್ ವೆಲ್ಸ್: ಇಲ್ಲಿ ನಡೆಯುತ್ತಿರುವ ಇಂಡಿಯನ್ ವೆಲ್ಸ್ ಪಂದ್ಯಾವಳಿಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ರಫೆಲ್ ನಡಾಲ್ ವಾಕ್ಒವರ್ ಮೂಲಕ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ನಡಾಲ್ ಮೂರನೇ ಸುತ್ತಿನಲ್ಲಿ ಅರ್ಜೆಟೀನಾದ ಲಿಯೊನಾರ್ಡೊ ಮೇಯರ್ ವಿರುದ್ಧ ಆಡಬೇಕಿತ್ತು. ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಮೇಯರ್ ಪಂದ್ಯದಿಂದ ಹೊರ ನಡೆದ ಹಿನ್ನಲೆಯಲ್ಲಿ ವಾಕ್ಒವರ್ ಪಡೆದ ನಡಾಲ್ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.