ಪಾರದರ್ಶಕಳಾದ ಉನಾ
ಖ್ಯಾತ ರಗ್ಬೀ ಆಟಗಾರ ಬೆನ್ ಫಾಡೆನ್ ಹೆಂಡತಿ ಉನಾ ಇತ್ತೀಚೆಗೆ ಹೆಚ್ಚೆಚ್ಚು ಮಾದಕವಾಗಿ ಕಾಣಿಸಿಕೊಳ್ಳುತ್ತಿದ್ದಾಳೆಂದು ಹಲವಾರು ಪತ್ರಿಕೆಗಳು ಪ್ರಕಟಿಸಿವೆ. ಅದಕ್ಕೆ ಸಾಕ್ಷಿಯೆಂಬಂತೆ, ಮೊನ್ನೆ ತಾನೆ ಆಕೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದಾಳೆ. ದ ಗ್ರೇಡ್ ಆ್ಯಂಡ್ ಪವರ್ ಫುಲ್ ಎಂಬ ಸಿನಿಮಾದ ಪ್ರೀಮಿಯರ್ ಷೋಗೆ ಆಗಮಿಸಿದ್ದ ಆಕೆ, ಪಾರದರ್ಶಕವಾದ ಉಡುಪನ್ನು ಧರಿಸಿ, ತನ್ನ ಗಂಡನೊಂದಿಗೆ ಆಗಮಿಸಿದ್ದಳು. ಆದರೆ, ಸಮಾರಂಭದಲ್ಲಿದ್ದ ಎಲ್ಲರ ದೃಷ್ಟಿ ಆಕೆಯ ಮುಖವನ್ನು ನೋಡಿದ ಮರುಕ್ಷಣವೇ ಮೇಲಿನಿಂದ ಕೆಳಗೆ ಜಾರುತ್ತಿತ್ತು. ಪಾರದರ್ಶಕ ಉಡುಪಿನ ಜೊತೆಯಲ್ಲೇ, ಆಕೆಯ ಬೆಳ್ಳಗಿನ ಮೈಮೇಲೆ ಧರಿಸಿದ್ದ ಕಡು ನೀಲಿ ಬಣ್ಣದ ಒಳವಸ್ತ್ರಗಳು ಮೇಲೆ ಧರಿಸಿದ್ದ ಪಾರದರ್ಶಕ ಗೌನ್‌ನಂಥಾ ಉಡುಪಿನೊಳಗಿಂದ ಎಲ್ಲರ ಗಮನ ಸೆಳೆಯುತ್ತಿದ್ದವು. ಇಷ್ಟರಮಟ್ಟಿಗೆ ಸಿಂಗಾರಗೊಂಡಿದ್ದ ಈಕೆ, ಇತ್ತೀಚೆಗೆ ತಾನು ಮತ್ತಷ್ಟು ಸೆಕ್ಸಿಯಾಗಿ ಎಲ್ಲರ ಮನಗಳಿಗೆ ಕಿಚ್ಚು ಹಚ್ಚುತ್ತಿರುವುದು ಸುಳ್ಳಲ್ಲ ಎಂದು ಸಾಬೀತುಪಡಿಸಿದ್ದಾಳೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.