'ವಾಟ್ಸನ್ರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ'
ಮೆಲ್ಬರ್ನ್: ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವಾಟ್ಸನ್ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿರುವ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ವಾಟ್ಸನ್ ಬಗೆಗೆ ಅನುಕಂಪ ತೋರಿದೆ. ವಾಟ್ಸನ್ ಅವರಂತಹ ಉತ್ತಮ ಆಟಗಾರನನ್ನು ಸರಿಯಾಗಿ ಬಳಸಿಕೊಳ್ಳಲು ದೇಶದ ಕ್ರಿಕೆಟ್ ವ್ಯವಸ್ಥೆ ವಿಫಲವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವ್ಯವಸ್ಥಾಪಕ ಪ್ಯಾಟ್ ಹೊವರ್ಡ್ ತಿಳಿಸಿದ್ದಾರೆ. ವಾಟ್ಸನ್ ವಿರುದ್ಧ ಶಿಸ್ತಿನ ಕ್ರಮದ ಬಗ್ಗೆ ಮಾತನಾಡುವುದಿಲ್ಲ. ಆದರೆ ವಾಟ್ಸನ್ರಿಂದ ಉತ್ತಮ ಫಲಿತಾಂಶ ಪಡೆಯುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿರುವುದು ನಮ್ಮ ತಪ್ಪು ಎಂದು ಹೊವರ್ಡ್ ಆಸೀಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾಟ್ಸನ್ ತಂಡದಲ್ಲಿ ಉತ್ತಮ ಆಟಗಾರನಾಗಿದ್ದು, ತಂಡದ ಒಳಿತಿಗಾಗಿ ಪ್ರದರ್ಶನ ನೀಡುವರು. ವಾಟ್ಸನ್ ಜತೆ ಚರ್ಚೆ ನಡೆಸಲು ಅವಕಾಶ ಸಿಕ್ಕರೆ ಈ ವಿಚಾರ ಕುರಿತು ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು.