ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ರಾಂತಿ ಆಸೀಸ್‌ಗೆ ಸಹಾಯವಾಗಲಿದೆ

Mainashree
Updated On : 12 Mar 2013, 11:22 am

ಮೆಲ್ಬರ್ನ್: ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ ನಂತರ ಆಸ್ಟ್ರೇಲಿಯಾ ತಂಡ ಎಂಟು ದಿನಗಳ ವಿಶ್ರಾಂತಿ ಪಡೆದಿದ್ದು, ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿಶ್ರಾಂತಿ ಪಡೆದಿರುವುದು ಆಸೀಸ್ ತಂಡ ಸರಣಿಯಲ್ಲಿ ಹೊಸ ಆರಂಭ ಪಡೆಯಲು ಸಹಕಾರಿಯಾಗಲಿದೆ ಎಂದು ಆಸೀಸ್ ಮಾಜಿ ಆಟಗಾರ ಆ್ಯಡಮ್ ಗಿಲ್‌ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ. ಕೆಲವೊಮ್ಮೆ ಈ ರೀತಿಯ ಸೋಲಿನಿಂದ ಹೊರ ಬರಲು ವಿರಾಮದ ಅವಶ್ಯಕತೆ ಇರುತ್ತದೆ. ಹಾಗಾಗಿ ಆಸೀಸ್ ತಂಡ ಮೂರನೇ ಟೆಸ್ಟ್ ಪಂದ್ಯಕ್ಕು ಮುನ್ನ 8 ದಿನಗಳ ವಿರಾಮ ಪಡೆದಿರುವುದು ಆಸೀಸ್ ಅನುಕೂಲವಾಗಲಿದೆ. 8 ದಿನಗಳ ವಿರಾಮ ಆಟಗಾರರು ಸೋಲಿನ ಕಹಿ ಮರೆತು ಸರಣಿಯನ್ನು ಹೊಸದಾಗಿ ಆರಂಭಿಸಲು ಸಹಾಯವಾಗಲಿದೆ ಎಂದು ಅವರು ತಿಳಿಸಿದರು. ಈ ವಿರಾಮದಿಂದ ಆಟಗಾರರಿಗೆ ಹೊಸ ಹುಮ್ಮಸ್ಸು ನೀಡಲಿದ್ದು ಪಂದ್ಯಾವಳಿಯಲ್ಲಿ ಮರು ಹೋರಾಟ ನಡೆಸಲು ಸಹಾಯವಾಗಲಿದೆ. ವಿರಾಮದ ನಂತರ ಆಟಗಾರರೆಲ್ಲರು ಹುಮ್ಮಸ್ಸಿನಿಂದ ಹೊಸ ಸರಣಿ ಆಡುವಂತೆ ಕಣಕ್ಕಿಳಿಯುತ್ತಾರೆ ಇದರಿಂದ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement