ಶಕೀರಾ ಶೋ ಆಫ್
ಸೆಲೆಬ್ರಿಟಿಗಳಿಗೆ ಮದ್ವೆ ಬಗ್ಗೆ ಒಂದು ರೀತಿಯ ತಾತ್ಸಾರ ಭಾವನೆ ಇರುತ್ತೆ. ಅದಕ್ಕೆ ಪ್ರಮುಖ ಕಾರಣ, ತಮ್ಮ ಗ್ಲಾಮರ್, ಫಿಗರ್ ಬಗ್ಗೆ ಅವರಿಗಿರುವ ಕಾಳಜಿ. ಆದರೆ, ಹಾಗೆ, ಮದುವೆಯಾಗಿ, ಮಕ್ಕಳನ್ನು ಮಾಡಿಕೊಂಡ ಮೇಲೂ ತಮ್ಮ ಗ್ಲಾಮರ್ಗೆ ಕುಂದು ಬರದ ರೀತಿಯಲ್ಲಿ ದೇಹ ಸೌಂದರ್ಯವನ್ನು ಕಾಯ್ದುಕೊಂಡವರೂ ಇದ್ದಾರೆ. ನಮ್ಮಲ್ಲಿ ಕಾಜೋಲ್ ಇದ್ದಾಳಲ್ಲ ಹಾಗೆ. ಈಗ ಇಂಥವರ ಸಾಲಿಗೆ ಶಕೀರಾ ಸಹ ಸೇರ್ಪಡೆಗೊಂಡಿದ್ದಾಳೆ. ಕೇವಲ 5 ವಾರಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿರುವ 36ರ ಪ್ರಾಯದ ಈ ಗಾಯಕಿ, ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಳು. ಅಬ್ಬಬ್ಬಾ ಮದುವೆಗಿಂತ ಮುಂಚೆ ಇದ್ದ ಆ ಶಕೀರಾಗೂ ಈ ಶಕೀರಾಗೂ ಯಾವುದೇ ವ್ಯತ್ಯಾಸವೂ ಇರಲಿಲ್ಲ. ಅಷ್ಟರಮಟ್ಟಿಗೆ ಗ್ಲಾಮರ್ ಮೇಂಟೇನ್ ಮಾಡಿದ್ದಾಳೆ ಆಕೆ. ಇದರ ರಹಸ್ಯವೇನೆಂದು ಕೇಳಿದರೆ, ಆಕೆ ಹೇಳಿದ್ದೇನು ಗೊತ್ತಾ ಎಲ್ಲಾ ನನ್ನ ಗಂಡ ಫುಟ್ಬಾಲಿಗ ಗೆನಾರ್ಡ್ ಪಿಕ್ನ ಬೆಂಬಲ ಪ್ರೋತ್ಸಾಹ ಎಂದಿದ್ದಾಳೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.