ಸೆಹ್ವಾಗ್ ತಂಡಕ್ಕೆ ಮರಳಲು ಲೆಲೆ ಬೆಂಬಲ
ಮುಂಬೈ: ಭಾರತ ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರನ್ನು ಕೈಬಿಟ್ಟ ವಿಚಾರಕ್ಕೆ ಅತೃಪ್ತಿ ವ್ಯಕ್ತ ಪಡಿಸಿರುವ ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್‌ವಂತ್ ಲೆಲೆ, ಸೆಹ್ವಾಗ್ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದು ಕ್ರಿಕೆಟ್‌ನ ಮೂರು ಮಾದರಿಗಳಲ್ಲೂ ಸೆಹ್ವಾಗ್ ತಂಡಕ್ಕೆ ಮರಳಬೇಕು ಎಂದು ತಿಳಿಸಿದರು.
ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ಗಳಿಸಿರುವ ಹಾಗೂ ಒಂದು ಬಾರಿ ತ್ರಿಶತಕದ ಹೊಸ್ತಿಲಿಗೆ ತಲುಪಿರುವ ಬ್ಯಾಟ್ಸ್‌ಮನ್ ಆಗಿದ್ದು, ಆತನೊಬ್ಬ ಪಂದ್ಯ ವಿಜೇತ. ನನ್ನ ಪ್ರಕಾರ ಸೆಹ್ವಾಗ್ ಫಿಟ್ ಆಗಿರುವವರೆಗೂ ಕ್ರಿಕೆಟ್‌ನ ಮೂರು ಮಾದರಿಯಲ್ಲೂ ತಂಡದಲ್ಲಿರಬೇಕು ಎಂದು ಲೆಲೆ ಅಭಿಪ್ರಾಯ ಪಟ್ಟಿದ್ದಾರೆ.