ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

2015 ವಿಶ್ವಕಪ್‌ಗೆ ರಾಲ್ಫ್ ವಾಟರ್ಸ್ ಅಧ್ಯಕ್ಷ

Mainashree
Updated On : 14 Mar 2013, 12:25 pm

ಮೆಲ್ಬರ್ನ್: ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಜಂಟಿಯಾಗಿ ಆಯೋಜಿಸುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಆಯೋಜನಾ ಸಮಿತಿಯ ಅಧ್ಯಕ್ಷರನ್ನಾಗಿ ರಾಲ್ಫ್ ವಾಟರ್ಸ್ ಅವರನ್ನು ನೇಮಕ ಮಾಡಲಾಗಿದೆ. ಕಳೆದವಾರ ವಿಶ್ವಕಪ್ ಆಯೋಜನಾ ಸಮಿತಿ ಅಧ್ಯಕ್ಷರಾಗಿದ್ದ ಜೇಮ್ಸ್ ಸ್ಟ್ರಾಂಗ್ ವಿಧಿವಶರಾದ ಹಿನ್ನಲೆಯಲ್ಲಿ ಬುಧವಾರ ಈ ಸಮಿತಿಗೆ ರಾಲ್ಫ್ ವಾಟರ್ಸ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ದಿವಂಗತ ಜೇಮ್ಸ್ ಸ್ಟ್ರಾಂಗ್ ಅವರಿಗೆ ನಮನ ಸಲ್ಲಿಸಿದ ವಾಟರ್ಸ್, ಜೇಮ್ಸ್ ಕೂಡ ನನ್ನಂತೆಯೇ 2015ರ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಲು ಸಾಕಷ್ಟು ಶ್ರಮ ವಹಿಸಿದ್ದರು. ನಾನು ಅವರ ಗುರಿಯೊಂದಿಗೆ ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಜತೆಗೆ ಉತ್ತಮ ಪಂದ್ಯಾವಳಿ ಆಯೋಜಿಸಲು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement