ಪೂಜಾರ ಫಿಟ್
ಮೊಹಾಲಿ: ಮಂಗಳವಾರ ಅಭ್ಯಾಸದ ವೇಳೆ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದ ಚೇತೇಶ್ವರ ಪೂಜಾರ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಆದರೆ, ಪೂಜಾರ ಮೊಹಾಲಿ ಟೆಸ್ಟ್ಗೆ ಫಿಟ್ ಆಗಿರುವ ಬಗ್ಗೆ ತಂಡದ ಸದಸ್ಯ ಶಿಖರ್ ಧವನ್ ಸ್ಪಷ್ಟನೆ ನೀಡಿ, ಅಭಿಮಾನಿಗಳಲ್ಲಿನ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಪೂಜಾರ ಸಂಪೂರ್ಣ ಫಿಟ್ ಆಗಿದ್ದು, ಮೊಹಾಲಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಮೂರನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿರುವ ಶಿಖರ್ ಧವನ್ ತಿಳಿಸಿದರು.
ಪೂಜಾರ ಅದ್ಭುತ ಫಾರ್ಮ್ನಲ್ಲಿದ್ದು, ಹೈದರಾಬಾದ್ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.