ವೀರೂ, ಗಂಭೀರ್ ಮಾದರಿಯ ಆಟಕ್ಕೆ ಯತ್ನಿಸುತ್ತೇವೆ: ಧವನ್
ಮೊಹಾಲಿ: ಭಾರತ ತಂಡದ ಪರ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಜೋಡಿಯಂತೆ ನಾನು ಹಾಗೂ ವಿಜಯ್ ಯಶಸ್ಸು ಗಳಿಸಲು ಪ್ರಯತ್ನಿಸುತ್ತೇವೆ ಎಂದು ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿರುವ ಶಿಖರ್ ಧವನ್ ತಿಳಿಸಿದ್ದಾರೆ.
ಸೆಹ್ವಾಗ್ ಮತ್ತು ಗಂಭೀರ್ ದೀರ್ಘಾವಧಿವರೆಗೆ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅದೇ ರೀತಿ ನಾನು ಹಾಗೂ ವಿಜಯ್ ಭವಿಷ್ಯದಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಪ್ರಯತ್ನಿಸುತ್ತೇವೆ ಎಂದು ಧವನ್ ತಿಳಿಸಿದ್ದಾರೆ. ಕಳೆದ 2 ಪಂದ್ಯಗಳಲ್ಲಿ ವೀರೂ ಕಣಕ್ಕಿಳಿದಿದ್ದರು. ಈ ಸಮಯದಲ್ಲಿ ಅವರೊಂದಿಗೆ ನಾನು ಚರ್ಚೆ ನಡೆಸಿದ್ದು, ಅವರಿಂದ ಕೆಲ ಅಂಶಗಳನ್ನು ಕಲಿಯುವ ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದರು.