ವ್ಯಾಟ್ಸನ್ 4ನೇ ಟೆಸ್ಟ್ ಆಡುವ ಭರವಸೆಯಲ್ಲಿ ಕ್ಲಾರ್ಕ್
ಮೊಹಾಲಿ: ಅಮಾನತಿನ ಶಿಕ್ಷೆಯಿಂದ ಬೇಸತ್ತ ವ್ಯಾಟ್ಸನ್ ತಮ್ಮ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವರು ಎಂಬ ಮಾತು ಕೇಳಿಬರುತ್ತಿರುವಾಗಲೇ, ಇತ್ತ ಆಸೀಸ್ನ ನಾಯಕ ಮೈಕಲ್ ಕ್ಲಾರ್ಕ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವ್ಯಾಟ್ಸನ್ ಆಡುವ ಭರವಸೆ ಇದೆ ಎಂದು ತಿಳಿಸಿದ್ದಾರೆ. ನನ್ನ ಪ್ರಕಾರ ವ್ಯಾಟ್ಸನ್ ತಂಡದ ಉಪನಾಯಕನಾಗಿದ್ದು, ತಂಡದ ಮುಖ್ಯ ಭಾಗವಾಗಿದ್ದಾರೆ. ನಾನು ವ್ಯಾಟ್ಸನ್ ಜತೆ ಮಾತನಾಡಿದ್ದು, ಆತ ತನ್ನ ಮೊದಲ ಮಗುವಿನ ಜನನದ ವಿಚಾರವಾಗಿ ತವರಿಗೆ ಮರಳಿದ್ದು ಈ ಬಗ್ಗೆ ವಾಟ್ಸನ್ ಹೆಚ್ಚು ಕುತೂಹಲ ಹೊಂದಿದ್ದಾನೆ. ಕೆಲವೇ ದಿನಗಳಲ್ಲಿ ಮಗು ಜನಿಸಲಿದ್ದು, ನಂತರ ವ್ಯಾಟ್ಸನ್ ತಂಡದ ಉಪನಾಯಕನಾಗಿ ಮತ್ತೆ ಭಾರತಕ್ಕೆ ಆಗಮಿಸಲಿದ್ದಾರೆ. ಇದು ತಂಡದ ಒಳಿತಿಗೆ ಅತಿ ಮುಖ್ಯ ಎಂಬುದು ನನ್ನ ವಾದ. ಉಳಿದ ವಿಚಾರ ವ್ಯಾಟ್ಸನ್ಗೆ ಬಿಡಲಾಗಿದೆ ಎಂದರು.