ಸೈಕ್ಲಿಂಗ್: ಭಾರತ ನೀರಸ ಪ್ರದರ್ಶನ
ಗ್ರೇಟರ್ ನೋಯಿಡಾ: ಭಾರತದ ಜೂನಿಯರ್ ಸೈಕ್ಲಿಂಗ್ ತಾರೆಗಳು ಬುಧವಾರ ಆರಂಭವಾದ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ರಸ್ತೆ ವಿಭಾಗದ ಸ್ಪರ್ಧೆಯಲ್ಲಿ ಆರಂಭಿಕ ಆಘಾತ ಅನುಭವಿಸಿದ್ದಾರೆ. ಬುಧವಾರ ಟ್ರೈಯಲ್ ವಿಭಾಗಗಳಲ್ಲಿ ಭಾಗವಹಿಸಿದ್ದ ಸುನಿತಾ ದೇವಿ ಮತ್ತು ರೊಹೀತ್ ಸ್ಪರ್ಧೆಯಲ್ಲಿ ಟಾಪ್- 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲೂ ವಿಫಲವಾದರು. ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ನಡೆದ ಬಾಲಕರ ಟ್ರೈಯಲ್ ವಿಭಾಗದಲ್ಲಿ 39 ನಿಮಿಷ 37.308 ಸೆಕೆಂಡ್‌ಗಳಲ್ಲಿ 28.2 ಕಿ.ಮೀ ಗುರಿಯನ್ನು ಕ್ರಮಿಸಿದ ರೋಹಿತ್ 11ನೇ ಸ್ಥಾನ ಪಡೆದರು. ಇನ್ನು ಸುನಿತಾ ದೇವಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ 42 ನಿಮಿಷ 36.593 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ 12 ಸ್ಥಾನ ಪಡೆದರು. 36 ನಿಮಿಷ 12.318 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಕಜಕಿಸ್ತಾನದ ದಿಮಿತ್ರಿ ರಿವೆ ಈ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಇನ್ನು 36 ನಿಮಿಷ 24.222 ಸೆಕೆಂಡ್‌ಗಳಲ್ಲಿ ಗುರಿ ಸೇರಿದ ಜಪಾನ್‌ನ ಮಾಸಕಿ ಯಮಾಮೋಟೆ ಬೆಳ್ಳಿ ಪಡೆದುಕೊಂಡರು. 37.706 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಇರಾನ್‌ನ ಮೊಹ್ದಿ ಎಬಾದಲ್ಲಾಹಿರಾಪ್ಸಂಜನಿ ಕಂಚಿಗೆ ಕೊರಳೊಡ್ಡಿದರು.