'ಆಸಿಸ್ ತಂಡ ಕ್ರಿಕೆಟ್ನ ಮ್ಯಾಂಚೆಸ್ಟರ್'
ನವದೆಹಲಿ: ಆಸ್ಟ್ರೇಲಿಯಾ ತಂಡದ ನಾಲ್ವರು ಪ್ರಮುಖ ಆಟಗಾರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿರುವ ತಂಡದ ಮುಖ್ಯ ಕೋಚ್ ಮಿಕಿ ಆರ್ಥರ್, ಆಸ್ಟ್ರೇಲಿಯಾ ತಂಡ ಕ್ರಿಕೆಟ್ನ ಮ್ಯಾಂಚೆಸ್ಟರ್ ಯುನೈಟೆಡ್ ಎಂದು ಬಣ್ಣಿಸಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಅಧಿಪತ್ಯ ಸಾಧಿಸುವ ಇಂಗಿತ ವ್ಯಕ್ತ ಪಡಿಸಿರುವ ಮಿಕಿ ಆರ್ಥರ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಫುಟ್ಬಾಲ್ನ ಪ್ರಮುಖ ತಂಡವಾಗಿರುವ ಮ್ಯಾಂಚೆಸ್ಟರ್ ಯುನೈಟೆಡ್ಗೆ ಹೋಲಿಸಿದ್ದಾರೆ.
ಬುಧವಾರ ಮೂರನೇ ಟೆಸ್ಟ್ ಪಂದ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಥರ್, ಇತರೆ ಕ್ರೀಡೆಗಳಲ್ಲಿನ ಅಗ್ರ ತಂಡಗಳು ತೋರುತ್ತಿರುವ ಗುಣಮಟ್ಟಕ್ಕೆ ಆಸೀಸ್ ತಂಡ ಸಮನಾಗಿದೆ ಎಂದು ತಿಳಿಸಿದರು.
'ನಾವು ವಿಶ್ವ ಕ್ರಿಕೆಟ್ನಲ್ಲಿ ಫುಟ್ಬಾಲ್ನ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಎಫ್1ನ ಮೆಕ್ಲಾರೆನ್ ತಂಡದಂತೆ ಹೊರಹೊಮ್ಮಲು ಇಚ್ಛಿಸುತ್ತೇವೆ' ಎಂದು ತಿಳಿಸಿದರು.