ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂಡಿಯನ್ ವೆಲ್ಸ್: ಕ್ವಾರ್ಟರ್‌ಫೈನಲ್‌ಗೆ ಫೆಡರರ್

Mainashree
Updated On : 14 Mar 2013, 10:27 am

ಇಂಡಿಯನ್ ವೆಲ್ಸ್: ಹಾಲಿ ಚಾಂಪಿಯನ್ ರೋಜರ್ ಫೆಡರರ್ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ಸ್ಟ್ಯಾನಿಸ್‌ಲಾಸ್ ವಾವ್ರಿಂಕಾ ವಿರುದ್ಧ ಜಯ ಸಾಧಿಸುವುದರೊಂದಿಗೆ ಇಂಡಿಯನ್ ವೆಲ್ಸ್‌ನ ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪಿದ್ದಾರೆ.
ಫೆಡರರ್ ವಿರುದ್ಧ 6-3, 6-7(4), 7-5 ಸೆಟ್‌ಗಳ ಅಂತರದಲ್ಲಿ ಸೋಲನುಭವಿಸಿರುವ ವಾವ್ರಿಂಕಾ,ಈ ಮೂಲಕ ಫೆಡರರ್ ವಿರುದ್ಧ ಸತತ 10ನೇ ಸೋಲು ಅನುಭವಿಸಿದ್ದಾರೆ. ಕಳೆದ ಆಗಸ್ಟ್ ನಂತರ ಮೊದಲ ಎಟಿಪಿ ಟೂರ್ ಪ್ರಶಸ್ತಿಯಲ್ಲಿ ಭಾಗವಹಿಸುತ್ತಿರುವ ಫೆಡರರ್ ತಮ್ಮ ಮುಂದಿನ ಹಂತದಲ್ಲಿ ರಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ 3ನೇ ರ್ಯಾಂಕಿಂಗ್‌ನ ಆ್ಯಂಡಿ ಮರ್ರೆ ತಮ್ಮ ಎದುರಾಳಿ ಕಾರ್ಲೊಸ್ ಬರ್ಲಕ್ ವಿರುದ್ಧ 7-6(4), 6-4 ಅಂತರದಲ್ಲಿ ಮಣಿಸಿದರು. 6ನೇ ರ್ಯಾಂಕಿಂಗ್‌ನ ಥಾಮಸ್ ಬರ್ಡಿಕ್ ತಮ್ಮ ಎದುರಾಳಿ ರಿಚರ್ಡ್ ಗಾಸ್‌ಕ್ವೆಟ್ ಅವರನ್ನು 6-1, 7-5 ಸೆಟ್‌ಗಳಿಂದ ಸೋಲಿಸಿದರು.
8ನೇ ರ್ಯಾಂಕಿಂಗ್‌ನ ಜೊ ವಿಲ್ಫ್ರೆಡ್ ತ್ಸೋಂಗಾ 17ನೇ ರ್ಯಾಂಕಿಂಗ್‌ನ ಮಿಲೊಸ್ ರೌನಿಕ್ ವಿರುದ್ಧ 6-1, 7-5 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಕೆವಿನ್ ಆ್ಯಂಡರ್ಸನ್ 13ನೇ ರ್ಯಾಂಕಿಂಗ್‌ನ ಗಿಲ್ಸ್ ಸಿಮನ್ ವಿರುದ್ಧ 6-3, 1-6, 6-4 ಅಂತರದಿಂದ ಗೆದ್ದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement