ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಭಾರತಕ್ಕೆ ನಾಲ್ಕು ಕಂಚು ಖಚಿತ

Mainashree
Updated On : 14 Mar 2013, 10:25 am

ನವದೆಹಲಿ: ಬಹು ನಿರೀಕ್ಷೆಯೊಂದಿಗೆ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ತೆರಳಿದ್ದ ಭಾರತೀಯ ಬಾಕ್ಸರ್‌ಗಳು, ಗುರುವಾರ ನಾಲ್ಕು ಕಂಚಿನ ಪದಕ ಖಚಿತಪಡಿಸಿದ್ದಾರೆ. ಭಾರತದ ನಾಲ್ವರು ಬಾಕ್ಸರ್‌ಗಳು ಪಂದ್ಯಾವಳಿಯ ಸೆಮಿಫೈನಲ್ ಹಂತಕ್ಕೆ ತಲುಪುವ ಮೂಲಕ ಬೆಳ್ಳಿ ಅಥವಾ ಚಿನ್ನದ ಭರವಸೆ ಮೂಡಿಸಿದ್ದಾರೆ.
91ಕ್ಕು ಹೆಚ್ಚಿನ ಕೆ.ಜಿ ವಿಭಾಗದಲ್ಲಿ ನರೇಂದ್ರ ಬೆರ್ವಾಲ್, 49 ಕೆ.ಜಿ ವಿಭಾಗದಲ್ಲಿ ಲಲಿತಾ ಪ್ರಸಾದ್, 91ಕೆ.ಜಿ ವಿಭಾಗದಲ್ಲಿ ಅಮೃತ್‌ಪ್ರೀತ್ ಸಿಂಗ್ ಮತ್ತು 81 ಕೆ.ಜಿ ವಿಭಾಗದಲ್ಲಿ ಅಭಿಷೇಕ್ ಬೆನಿವಾಲ್ ಸೆಮಿಫೈನಲ್ ಹಂತಕ್ಕೆ ತಲುಪಿದ್ದಾರೆ.
ನರೇಂದ್ರ ಬೆರ್ವಾಲ್ ತಮ್ಮ ಎದುರಾಳಿ ವಿರುದ್ಧ ಕಜಕಿಸ್ತಾನದ ದಸ್ತನ್ ಕುರ್ಮಾನ್ಬೆಟೊವ್ ವಿರುದ್ಧ 1-4 ಅಂತರದ ಭರ್ಜರಿ ಜಯ ಸಾಧಿಸಿದರು. ಇನ್ನು ಪ್ರಸಾದ್ ತಮ್ಮ ಎದುರಾಳಿ ಇಂಡೋನೆಷ್ಯಾದ ಜುನ್ ಎಂಕಾಂಗ್ ವಿರುದ್ಧ 11-7 ಅಂತರದಲ್ಲಿ ಜಯ ಸಾಧಿಸಿದರು.
ಇನ್ನು ಸಂದೀಪ್ ಶರ್ಮಾ 75ಕೆ.ಜಿ ವಿಭಾಗದಲ್ಲಿ, ದಿನೇಶ್ 64 ಕೆ.ಜಿ ವಿಭಾಗದಲ್ಲಿ, ನಾಗೇಶ್ ಖರಾರೆ 60 ಕೆ.ಜಿ ವಿಭಾಗದಲ್ಲಿ, ಮಂಗೀತ್ ಪಂಗಲ್ 69 ಕೆ.ಜಿ ವಿಭಾಗದಲ್ಲಿ ಸೋಲನುಭವಿಸಿದ್ದು, ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement