ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐ- ಲೀಗ್: ಸದರ್ನ್ ಸಮಿತಿಗೆ ಜಯ

Mainashree
Updated On : 14 Mar 2013, 10:26 am

ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ಕೋಲ್ಕತಾದ ಸದರ್ನ್ ಸಮಿತಿ ತಂಡ ಕೇರಳದ ಈಗಲ್ಸ್ ತಂಡವನ್ನು 1-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಸದರ್ನ್ ಸಮಿತಿ ತಂಡದ ಪಂದ್ಯದ 34ನೇ ನಿಮಿಷದಲ್ಲಿ ಎಂ. ಬಸಂತ್ ಗೋಲು ದಾಖಲಿಸಿದರು. ಎರಡನೇ ಪಂದ್ಯದಲ್ಲಿ ಕೋಲ್ಕತಾದ ಕಾಳಿಘಾಟ್ ತಂಡ ಮುಂಬೈ ಟೈಗರ್ಸ್ ತಂಡದ ವಿರುದ್ಧ ಸೋಲನುಭವಿಸಿದೆ. ಮುಂಬೈ ಟೈಗರ್ಸ್ ಪಂದ್ಯದಲ್ಲಿ 2 ಗೋಲು ದಾಖಲಿಸಿದರೆ, ಕಾಳಿಘಾಟ್ 1 ಗೋಲು ದಾಖಲಿಸಿತು. ಕಾಳಿಘಾಟ್ ತಂಡದ ಪರ ಪಂದ್ಯದ 44ನೇ ನಿಮಿಷದಲ್ಲಿ ಕ್ರಿಸ್ಟೋಪರ್ ಗೋಲು ದಾಖಲಿಸಿದರು. ಇನ್ನು ಮುಂಬೈ ತಂಡದ ಪರ ಪಂದ್ಯದ 90ನೇ ನಿಮಿಷದಲ್ಲಿ ಪ್ರದೀಪ್ ಹಾಗೂ ಹೆಚ್ಚುವರಿ ಸಮಯದಲ್ಲಿ ದೆಂಬಾ ದಿಖಾತೆ ಮತ್ತೊಂದು ಗೋಲು ದಾಖಲಿಸಿದರು. ಶುಕ್ರವಾರ ಒಂದು ಪಂದ್ಯ ಮಾತ್ರ ನಡೆಯಲಿದ್ದು, ಮಿಜೋರಾಮ್‌ನ ಲೂನಾಗ್‌ಮೌಲ್ ಎಫ್‌ಸಿ ಮತ್ತು ಹಿಂದುಸ್ಥಾನ್ ಎಫ್‌ಸಿ ಜಯಕ್ಕಾಗಿ ಸೆಣಸಲಿವೆ. ಪಂದ್ಯ ಸಂಜೆ 4:00ಕ್ಕೆ ಆರಂಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement