ಸ್ವಿಸ್ ಓಪನ್: ಸೈನಾ ಕ್ವಾರ್ಟರ್‌ಫೈಲ್‌ಗೆ
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸ್ವಿಸ್ ಓಪನ್...
ಬಸೆಲ್: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸ್ವಿಸ್ ಓಪನ್ ಗ್ರಾನ್ ಪ್ರಿಕ್ಸ್ ಗೋಲ್ಡ್ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಸೈನಾ ನೆಹ್ವಾಲ್, ಫ್ರಾನ್ಸ್‌ನ ಸಶಿನಾ ವಿಗ್ನೇಸ್ ವಾರ್ನ್ ಅವರನ್ನು 13-21, 21-15, 21-12 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸೈನಾ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೆಟ್ಯಾ ನೆದೆಚೇವಾ ಅವರನ್ನು ಎದುರಿಸಲಿದ್ದಾರೆ.
ಕಶ್ಯಪ್ ಸೋಲು: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪರುಪಲ್ಲಿ ಕಶ್ಯಪ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋನುಭವಿಸಿದ್ದಾರೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಶ್ಯಪ್ ಮಲೇಷ್ಯಾದ ವ್ಯೂ ಫೆಂಗ್ ಚಾಂಗ್ ವಿರುದ್ಧ 18-21, 21-7, 21-16 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ಎರಡನೇ ಸ್ಥಾನಕ್ಕೆ ಸೈನಾ
ನವದೆಹಲಿ: ಸೈನಾ ನೆಹ್ವಾಲ್, ವಿಶ್ವ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಮರಳಿದ್ದಾರೆ. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ 2 ಸ್ಥಾನ ಬಡ್ತಿ ಪಡೆದಿರುವ ಕಶ್ಯಪ್ 7ನೇ ಸ್ಥಾನಕ್ಕೇರಿದ್ದಾರೆ. 3ನೇ ಸ್ಥಾನಕ್ಕೆ ಕುಸಿದಿದ್ದ ಸೈನಾ, ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿ2ನೇ ಸ್ಥಾನಕ್ಕೆ ಮರಳಿದ್ದಾರೆ.