ಸಿಂಧು, ಕಶ್ಯಪ್‌ಗೂ ಸೋಲು
ಐಪೋ: ಸೈನಾ ಅವರನ್ನು ಹೊರತುಪಡಿಸಿದಂತೆ, ಈ ಬಾರಿಯ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಉದಯೋನ್ಮುಖ ಆಟಗಾರರಾದ ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್, ಎಚ್.ಎಸ್. ಪ್ರಣಯ್ ಅವರು ಶುಕ್ರವಾರ ಸೋಲು ಕಂಡು ಪಂದ್ಯಾವಳಿಯಿಂದ ನಿರ್ಗಮಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು, ಜಪಾನ್‌ನ ಯುಯ್ ಹ್ಯಾಶಿಮಿಟೋ ಅವರ ವಿರುದ್ಧ 21-23, 11-21 ಅಂತರದಲ್ಲಿ ಸೋತರು.
ಅತ್ತ, ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಅವರು, ಮಲೇಷ್ಯಾದ ವೆಯ್ ಫೆಂಗ್ ಚಾಂಗ್ ಅವರ ವಿರುದ್ಧ 21-18, 7-21, 16-21 ಅಂತರದಲ್ಲಿ ಸೋತು ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದರು.
ಶುಕ್ರವಾರವೇ ನಡೆದ ಮತ್ತೊಂದು ಪುರುಷರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ ಅವರು, ತೈಪೇನ ಟಿಯೆನ್ ಚೌ ಅವರ ವಿರುದ್ಧ 16-21, 21-15, 15-21 ಅಂತರದಲ್ಲಿ ಪರಾಭವಗೊಂಡರು.
ಡಬಲ್ಸ್‌ನಲ್ಲೂ ನಿರಾಸೆ: ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದ ಪ್ರಣವ್, ಪುರುಷರ ಡಬಲ್ಸ್ ವಿಭಾಗದಲ್ಲೂ ಸೋಲು ಕಂಡರು. ಜೊತೆಗಾರ ಅಕ್ಷಯ್‌ದೇವಾಲ್ಕರ್ ಅವರ ಜೊತೆ, ಶುಕ್ರವಾರ ನಡೆದ ಪಂದ್ಯದಲ್ಲಿ ಕೊರಿಯಾದ ಅಗ್ರ ಜೋಡಿಯಾದ ಸಂಗ್ ಹ್ಯೂನ್ ಕೊ ಹಾಗೂ ಯಂಗ್ ಡೇ ಲೀ ಅವರ ವಿರುದ್ಧ ಸೆಣೆಸಿದ್ದ ಭಾರತದ ಜೋಡಿ, 21-14, 21-12 ಅಂತರದಲ್ಲಿ ಸೋಲು ಕಂಡಿತು.