ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೆಸ್ಟ್: ಕುಸಿದ ಬಾಂಗ್ಲಾದೇಶ

Rashmi Kasaragodu
Updated On : 16 Mar 2013, 10:56 am

ಕೊಲಂಬೊ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ 8 ಶತಕಗಳು ದಾಖಲಾಗುವ ಮೂಲಕ ಬ್ಯಾಟ್ಸ್‌ಮನ್‌ಗಳು ತಮ್ಮ ಪ್ರಾಬಲ್ಯ ಮೆರೆದರೆ, ಶನಿವಾರದಿಂದ ಆರಂಭವಾಗಿರುವ ಎರಡನೇ ಪಂದ್ಯದಲ್ಲಿ ಲಂಕಾ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಲಂಕನ್ನರು ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳನ್ನು ಆರಂಭದಿಂದಲೂ ಕಾಡಿದರು. ಮೊದಲ ಟೆಸ್ಟ್ ಪಂದ್ಯದಲ್ಲಿ 2 ಶತಕ ಹಾಗೂ 1 ದ್ವಿಶತಕ ದಾಖಲಿಸಿದ್ದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು, ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರನ್‌ಗಳಿಸಲು ಪರದಾಡಿದರು. ಅಂತಿಮವಾಗಿ, ಬಾಂಗ್ಲಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 240 ಗಳಿಸಿತು.
ಬಾಂಗ್ಲಾ ಇನಿಂಗ್ಸ್ ನಂತರ, ತಮ್ಮ ಇನಿಂಗ್ಸ್ ಆರಂಭಿಸಿದ ಲಂಕನ್ನರು ದಿನಾಂತ್ಯಕ್ಕೆ ನಾಲ್ಕು ಓವರ್‌ಗಳಲ್ಲಿ 18 ರನ್‌ಗಳಿಸಿದ್ದು 1 ವಿಕೆಟ್ ಕಳೆದುಕೊಂಡಿದೆ. ಕರುಣಾರತ್ನೆ 12 ಹಾಗೂ ಸಂಗಕ್ಕಾರ 3 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement