ಮರೆಗೆ ಸರಿದ ವಿಶಿ ದಾಖಲೆ
ಭಾರತೀಯ ಕ್ರಿಕೆಟ್ ಯಾವತ್ತೂ ಮರೆಯಲಾರದ ಕ್ರಿಕೆಟಿಗರಲ್ಲಿ ಒಬ್ಬರಾದ ಕನ್ನಡಿಗರಾದ ಗುಂಡಪ್ಪ ವಿಶ್ವನಾಥ್ ಅವರ ದಾಖಲೆಯನ್ನು ಶಿಖರ್ ಧವನ್ ಶನಿವಾರ ಹಿಂದಿಕ್ಕಿದರು. 1969ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಗುಂಡಪ್ಪ ವಿಶ್ವನಾಥ್ ಅಂತಾರಾಷ್ಟ್ರೀಯ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೇ ಔಟಾಗಿದ್ದ ಅವರು, ದ್ವಿತೀಯ ಇನಿಂಗ್ಸ್ನಲ್ಲಿ 137 ರನ್ ಗಳಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಗುಂಡಪ್ಪ ವಿಶ್ವನಾಥ್ ಅವರ ಹೆಸರಿನಲ್ಲೇ ಇತ್ತು. ಇದೀಗ 44 ವರ್ಷಗಳ ನಂತರ, ಅವರ ದಾಖಲೆಯನ್ನು ಶಿಖರ್ ಧವನ್ ಹಿಂದಿಕ್ಕಿದ್ದಾರೆ.