ವೆಲ್ಲಿಂಗ್ಟನ್ ಟೆಸ್ಟ್: ಕಿವೀಸ್ ಮೇಲೆ ಫಾಲೋ ಆನ್
ವೆಲ್ಲಿಂಗ್ಟನ್: ಇಂಗ್ಲೆಂಡ್ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಫಾಲೋಆನ್ ಸುಳಿಯಲ್ಲಿ ಸಿಲುಕಿದ್ದು, ಸೋಲಿನ ಭೀತಿಯನ್ನು ಎದುರಿಸುತ್ತಿದೆ.
ಪಂದ್ಯದ ಎರಡನೇ ದಿನಾಂತ್ಯಕ್ಕೆ 66 ರನ್ಗಳಿಸಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತು. ಶನಿವಾರ ಇನಿಂಗ್ಸ್ ಮುಂದುವರೆಸಿದ ನ್ಯೂಜಿಲೆಂಡ್, ಪ್ರಥಮ ಇನಿಂಗ್ಸ್ನಲ್ಲಿ 254 ರನ್ಗಳಿಗೆ ಆಲೌಟ್ ಆಗಿ, 211 ರನ್ಗಳ ಹಿನ್ನಡೆ ಎದುರಿಸಿತು. ಆಗ, ಕುಕ್ ಅವರು, ಕಿವೀಸ್ ಮೇಲೆ ಫಾಲೋಆನ್ ಹೇರಿದರು.
ನಂತರ ಎರಡನೇ ಇನಿಂಗ್ಸ್ ಆರಂಭಿಸಿರುವ ಕಿವೀಸ್ ಶನಿವಾರ ದಿನಾಂತ್ಯಕ್ಕೆ 77 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಸೋಲಿನ ಸನಿಹದಲ್ಲಿದೆ. ಆರಂಭಿಕ ಫುಲ್ಟಾನ್ 41 ಹಾಗೂ ವಿಲಿಯಮ್ಸನ್ 16 ರನ್ಗಳಿಸಿ ಅಜೇಯರಾಗುಳಿದಿದ್ದು, ನಾಲ್ಕನೇ ದಿನ ತಮ್ಮ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 465/10
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ 254/10
ಮೆಕಲಂ 69, ವಾಟ್ಲಿಂಗ್ 60
ಬೌಲಿಂಗ್: ಬ್ರಾಡ್ 51/6, ಆ್ಯಂಡರ್ಸನ್ 68/2.
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 77/1 (ಫಾಲೋಆನ್), ಫುಲ್ಟಾನ್ ಅಜೇಯ 41, ವಿಲಿಯಮ್ಸನ್ ಅಜೇಯ 16
ಬೌಲಿಂಗ್: ಪನೇಸರ್ 13/1