100ನೇ ಟೆಸ್ಟ್ ಆಡಿದ ಭಜ್ಜಿಗೆ ಸನ್ಮಾನ
ಮೊಹಾಲಿ: ಟೆಸ್ಟ್ ಕ್ರಿಕೆಟ್ನಲ್ಲಿ 100ನೇ ಪಂದ್ಯ ಪೂರೈಸಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಿಗೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಭಾನುವಾರ ಸನ್ಮಾನ ಮಾಡಿತು. ಮಹಾಲಿ ಪಂದ್ಯಕ್ಕೆ ಕೈಬಿಡಲಾಗಿರುವ 32 ವರ್ಷದ ಹರ್ಭಜನ್ ಅವರಿಗೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಪಿ ಪೊಂಡೋ ಸನ್ಮಾನ ಮಾಡಿದರು. ಆಸೀಸ್ ವಿರುದ್ಧ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಭಾಗವಹಿಸುವ ಮೂಲಕ ಹರ್ಭಜನ್ 100ನೇ ಪಂದ್ಯ ಪೂರೈಸಿದ್ದರು.