ಕ್ಲಾರ್ಕ್ ಗೆ ಗಾಯ
ಮೊಹಾಲಿ: ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಬೆನ್ನು ನೋವಿನಿಂದ ಬಳಲುತ್ತಿದ್ದು, 3ನೇ ಟೆಸ್ಟ್ ಪಂದ್ಯದ 5ನೇ ದಿನ ಆಡುವುದು ಅನುಮಾನ ಉಂಟುಮಾಡಿದೆ.
ಭಾನುವಾರ ರಾತ್ರಿ ಕ್ಲಾರ್ಕ್, ಚಿಕಿತ್ಸೆಗೊಳಗಾಗಲಿದ್ದು, ನಂತರ ಅವರ ಗಾಯದ ಸ್ಥಿತಿಗತಿಯ ಬಗ್ಗೆ ದೈಹಿಕ ತಜ್ಞ ಅಲೆಕ್ಸ್ ಕೌಂಟೌರಿ ತಿಳಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಾಧ್ಯಮ ವ್ಯವಸ್ಥಾಪಕ ಮ್ಯಾಟ್ ಸೆನಿನ್ ಹೇಳಿದ್ದಾರೆ.
ಒಂದು ವೇಳೆ ಕ್ಲಾರ್ಕ್ ಗಾಯ ಗಂಭೀರವಾಗಿದ್ದರೆ ಅವರು ಅಂತಿಮ ದಿನಕ್ಕೆ ಅಲಭ್ಯರಾಗಲಿದ್ದು, ಆಸೀಸ್ಗೆ ಆತಂಕವಾಗಿ ಪರಿಣಮಿಸಿದೆ.