ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೈಕೋನನ್ ಮಡಿಲಿಗೆ ಆಸ್ಟ್ರೇಲಿಯನ್ ಜಿಪಿ

Rashmi Kasaragodu
Updated On : 18 Mar 2013, 12:02 pm

ಮೆಲ್ಬರ್ನ್: ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದ ಲೋಟಸ್ ತಂಡದ ಕಿಮಿ ರೈಕೋನನ್ ಈ ವರ್ಷದ ಮೊದಲ ಗ್ರ್ಯಾನ್ ಪ್ರೀ ರೇಸ್ ಆದ ಆಸ್ಟ್ರೇಲಿಯನ್ ಜಿಪಿ ಗೆದ್ದಿದ್ದಾರೆ.
ಶನಿವಾರ ನಡೆದಿದ್ದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪೋಲ್ ಪೊಸಿಷನ್ ಗೆದ್ದಿದ್ದ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ಅವರನ್ನು ಹಿಂದಿಕ್ಕಿದ ರೈಕೋನನ್ ಮೊದಲ ಸ್ಥಾನ ಗಳಿಸಿ ಬೀಗಿದರು.
ಏಳನೇ ಸ್ಥಾನದಿಂದ ಸ್ಪರ್ಧೆಗಳಿದಿದ್ದ ರೈಕೋನನ್ ಮೊದಲ ಸ್ಥಾನ ಗಳಿಸಿದರೆ, ಫೆರಾರಿ ತಂಡದ ಫರ್ನಾಂಡೋ ಅಲೊನ್ಸೊ ಅವರು ದ್ವಿತೀಯ ಹಾಗೂ ರೆಡ್ಬುಲ್ ತಂಡದ ಸೆಬಾಸ್ಟಿಯನ್ ವೆಟಲ್ ತೃತೀಯ ಸ್ಥಾನ ಪಡೆದರು.
2007ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರೈಕೋನನ್ ಅವರಿಗೆ ಇದು ಅವರ ವೃತ್ತಿಜೀವನದ 20ನೇ ಜಿಪಿಯಾಗಿದೆ.
58 ಲ್ಯಾಪ್ಗಳ ಸರ್ಕ್ಯೂಟ್ನ ಅಂತಿಮ ಹಂತದಲ್ಲಿ ಅತಿ ವೇಗದ ಚಾಲನೆ ಮಾಡಿದ ಕಿಮಿ, ಅಲಾನ್ಸೋ ಅವರನ್ನು 12.4 ಸೆಕೆಂಡ್ಗಳ ಅಂತರದಲ್ಲಿ ಹಾಗೂ ವೆಟ್ಟಲ್ ಅವರನ್ನು 9.8 ಸೆಕೆಂಡ್ಗಳ ಅಂತರದಲ್ಲಿ ಹಿಂದಿಕ್ಕಿ ರೇಸ್ನ ಮುಂಚೂಣಿಗೆ ಬಂದರು.
ಭಾರತದ ಸಾಧನೆ: ಪ್ರಸಕ್ತ ವರ್ಷದ ಆರಂಭದ ರೇಸ್ನಲ್ಲೇ ಭಾರತದ ಸಹರಾ ಫೋರ್ಸ್ ಇಂಡಿಯಾದ ಚಾಲಕರು ಉತ್ತಮ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಆಸ್ಟ್ರೇಲಿಯನ್ ಜಿಪಿಯಲ್ಲಿ ಸಹರಾ ಫೋರ್ಸ್ ಇಂಡಿಯಾದ ಆ್ಯಂಡ್ರಿಯಲ್ ಸುಟಿಲ್ ಹಾಗೂ ಪೌಲ್ ಡಿ ರೆಸ್ತಾ ಅವರು ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನ ಗಳಿಸಿದರು. ತಮ್ಮ ತಂಡಕ್ಕೆ 10 ಅಂಕಗಳನ್ನು ಅವರು ತಂದುಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement