ಲಂಕೆಗೆ ಸಂಗಕ್ಕಾರ, ಚಂಡಿಮಲ್ ಆಸರೆ
ಕೊಲಂಬೋ: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನ ಎರಡನೇ ದಿನವಾದ ಭಾನುವಾರ ಪಟಪಟನೆ ವಿಕೆಟ್ಗಳನ್ನು ಕಳೆದುಕೊಂಡು ಆತಂಕದ ಸ್ಥಿತಿಯಲ್ಲಿದ್ದ ಲಂಕೆಗೆ ಕುಮಾರ ಸಂಗಕ್ಕಾರ ಹಾಗೂ ಚಂಡಿಮಲ್ ಆಸರೆಯಾದರು. ಮೊದಲ ದಿನ ಬಾಂಗ್ಲಾದ ಮೊದಲ ಇನಿಂಗ್ಸನ್ನು 240 ರನ್ಗಳಿಗೆ ನಿಯಂತ್ರಿಸಿ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದ ಲಂಕೆಗೆ ಭಾನುವಾರ ಸಂಗಕ್ಕಾರ ಹಾಗೂ ಚಂಡಿಮಲ್ ಆಸರೆಯಾಗಿ ನಿಂತರು. ಮಧ್ಯಮ ಕ್ರಮಾಂಕದ ತಿರಿಮಾನೆ, ಮ್ಯಾಥ್ಯೂಸ್ ಬೇಗನೇ ಔಟಾದರೂ, ಚಂಡಿಮಲ್ ಅವರೊಂದಿಗೆ 5ನೇ ವಿಕೆಟ್ಗೆ 195 ರನ್ ಭರ್ಜರಿ ಜೊತೆಯಾಟವಾಡಿದ ಸಂಗಕ್ಕಾರ, ಕುಸಿಯುತ್ತಿದ್ದ ಲಂಕಾ ಇನಿಂಗ್ಸನ್ನು ಎತ್ತಿ ನಿಲ್ಲಿಸಿದರು. ಏತನ್ಮಧ್ಯೆ, ಚಂಡಿಮಲ್ ಸಹ ಶತಕ ಬಾರಿಸಿದರು. ಶತಕ ಗಳಿಸಿದ ಚಂಡಿಮಲ್ ಔಟಾದ ನಂತರ, ಬಂದ ವಿದನಾಗೆ ಆಡಲಿಲ್ಲ. ದಿನಾಂತ್ಯಕ್ಕೆ ಅಜೇಯ 127 ರನ್ ಗಳಿಸಿರುವ ಸಂಗಕ್ಕಾರ, 2 ರನ್ ಗಳಿಸಿರುವ ಕುಲಸೇಕರ ಅವರೊಂದಿಗೆ ಕ್ರೀಸ್ನಲ್ಲಿ ಉಳಿದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 240
ಶ್ರೀಲಂಕಾ ಪ್ರಥಮ ಇನಿಂಗ್ಸ್ 294/6
(ಶನಿವಾರ ದಿನಾಂತ್ಯಕ್ಕೆ 18/1)
ಸಂಗಕ್ಕಾರ ಅಜೇಯ 127, ಚಂಡಿಮಲ್ 102, ಕುಲಸೇಕರ
ಬೌಲಿಂಗ್: ರಬೀವುಲ್ 52/2, ರುಬೇಲ್ 41/2