ವೆಲ್ಲಿಂಗ್ಟನ್ ಟೆಸ್ಟ್: ಕಿವೀಸ್ ಚೇತರಿಕೆ
ವೆಲ್ಲಿಂಗ್ಟನ್: ದುರ್ಬಲ ಬ್ಯಾಟಿಂಗ್ನಿಂದಾಗಿ ಆಂಗ್ಲರ ವಿರುದ್ಧದ 2ನೇ ಟೆಸ್ಟ್ನಲ್ಲಿ ಫಾಲೋ ಆನ್ಗೆ ಒಳಗಾಗಿರುವ ನ್ಯೂಜಿಲೆಂಡ್ ತಂಡ, ಪಂದ್ಯದ 4ನೇ ದಿನವಾದತ ಭಾನುವಾರ ಕೊಂಚ ಉತ್ತಮ ಪ್ರದರ್ಶನ ನೀಡಿತು. ಫಾಲೋ ಆನ್ ಹೇರಿಸಿಕೊಂಡ ತರುವಾಯ ಶನಿವಾರ ದಿನಾಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್, 77 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಭಾನುವಾರ ಅದು ಮತ್ತೊಂದು ವಿಕೆಟ್ ಕಳೆದುಕೊಂಡಿತಾದರೂ, ಮೂರನೇ ಕ್ರಮಾಂಕದ ವಿಲಿಯಮ್ಸನ್ ಹಾಗೂ ನಾಲ್ಕನೇ ಕ್ರಮಾಂಕದ ಟೇಲರ್ ಇಬ್ಬರ 81 ರನ್ಗಳ ಜೊತೆಯಾಟದಿಂದ ಕೊಂಚ ದಿಟ್ಟತನವನ್ನು ತೋರಿದೆ. ಶನಿವಾರ ದಿನಾಂತ್ಯಕ್ಕೆ 16 ರನ್ಗಳೊಂದಿಗೆ ಅಜೇಯರಾಗಿ ಉಳಿದಿದ್ದ ವಿಲಿಯಮ್ಸನ್ ಅವರು, ಆರಂಭಿಕ ಪುಲ್ಟನ್ (ಅಜೇಯ 41) ಅವರೊಂದಿಗೆ ಇನಿಂಗ್ಸ್ ಮುಂದುವರೆಸಿದರು. ಆದರೆ, ವೈಯಕ್ತಿಕ ಮೊತ್ತಕ್ಕೆ 3 ರನ್ ಸೇರಿಸಿದ ಮೇಲೆ ಫುಲ್ಟನ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 465
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ 254
ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ 162/2
(ಫಾಲೋ ಆನ್) (ಭಾನುವಾರ ದಿನಾಂತ್ಯಕ್ಕೆ)
ಫುಲ್ಟನ್ 45, ವಿಲಿಯಮ್ಸನ್ ಅಜೇಯ 55,
ಟೇಲರ್ ಅಜೇಯ 41
ಬೌಲಿಂಗ್: ಆ್ಯಂಡರ್ಸನ್ 27/1, ಪನೇಸರ್ 44/1