ಸೈನಾ ಕನಸು ಮತ್ತೆ ಭಗ್ನ
ಬಾಸೆಲ್: ಇದೇ ತಿಂಗಳ ಆರಂಭದಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ವರೆಗೂ ತಮ್ಮ ಅಭಿಯಾನ ಮುಂದುವರೆಸಿ, ಮುಗ್ಗರಿಸಿದ್ದ ಸೈನಾ ನೆಹ್ವಾಲ್, ಸ್ವಿಸ್ ಓಪನ್ ಪಂದ್ಯಾವಳಿಯಲ್ಲೂ ಅದನ್ನೇ ಪುನರಾವರ್ತಿಸಿದ್ದಾರೆ. ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ವರೆಗೂ ಲಗ್ಗೆಯಿಟ್ಟಿದ್ದ ಹಾಲಿ ಚಾಂಪಿಯನ್ ಸೈನಾ, ಶನಿವಾರ ನಡೆದ ಸೆಮಿಫೈನಲ್ನಲ್ಲಿ ಚೀನಾದ ಶಿಕ್ಸಿಯಾನ್ ವಾಂಗ್ ವಿರುದ್ಧ 11-21, 21-10, 9-21 ಅಂತರದಲ್ಲಿ ಸೋಲು ಕಂಡು, ಪಂದ್ಯಾವಳಿಯಿಂದ ಹೊರನಡೆದಿದ್ದಾರೆ. ಕಳೆದೆರಡು ವರ್ಷಗಳಿಂದ ಸ್ವಿಸ್ ಓಪನ್ ಗೆಲ್ಲುತ್ತಾ ಬಂದಿದ್ದ ಸೈನಾ, ಸತತ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸಿನಿಂದ ವಂಚಿತವಾಗಿದ್ದಾರೆ.