ಕಾಳಿಘಾಟ್, ವಾಸ್ಕೊಗೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಡಿವಿಷನ್ ಐ ಲೀಗ್ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ, ಕಾಳಿಘಾಟ್, ಎನ್ಆರ್ಬಿ ವಾಸ್ಕೊ ತಂಡಗಳು ಜಯ ಗಳಿಸಿವೆ.
ಕಾಳಿಘಾಟ್ ಹಾಗೂ ಲ್ಯುನಾಮ್ಯುಯಲ್ ನಡುವೆ ನಡೆದ ಪಂದ್ಯದಲ್ಲಿ ಕಾಳೀಘಾಟ್ ತಂಡ 8-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಕಾಳೀಘಾಟ್ ಪರವಾಗಿ, ಜೇಮ್ಸ್ ಜೆಬಿಲೀ (9ನೇ, 22ನೇ ನಿಮಿಷ), ಮೈಕಲ್ ಸೆಗುನ್ ಟಾಯೋ (13ನೇ ನಿಮಿಷ), ಟ್ಯಾನ್ಮೋಯ್ ಕುಂಡು (30ನೇ ನಿಮಿಷ), ಕ್ರಿಸ್ಟೋಫರ್ (56ನೇ, 60ನೇ, 73ನೇ ನಿಮಿಷ) ಹಾಗೂ ಕ್ರಿಷ್ಣದಾಸ್ (58ನೇ ನಿಮಿಷ) ಗೋಲು ಗಳಿಸಿದರು.
ವಾಸ್ಕೋಗೆ ಜಯ: ಗುರುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಈಗಲ್ ಹಾಗೂ ವಾಸ್ಕೊ ತಂಡಗಳು ನಡುವೆ ನಡೆದ ಪಂದ್ಯದಲ್ಲಿ ವಾಸ್ಕೊ ತಂಡ 1-0 ಅಂತರದಲ್ಲಿ ಜಯ ಸಾಧಿಸಿತು. ಪಂದ್ಯದ 92ನೇ ನಿಮಿಷದಲ್ಲಿ ಬಾಬುತುಂಡೆ ಅವರು, ಗಳಿಸಿದ ಗೋಲಿನಿಂದ ವಾಸ್ಕೋ ಜಯ ಸಾಧಿಸಿತು.
ಯುನೈಟೆಡ್ಗೆ ಗೆಲವು: 'ಎ' ಗುಂಪಿನ ಪಂದ್ಯದಲ್ಲಿ, ಆರ್. ಯುನೈಟೆಡ್ ಫುಟ್ಬಾಲ್ ಕ್ಲಬ್ ಹಾಗೂ ಕೆಜಿಎಫ್ ಅಕಾಡೆಮಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಯುನೈಟೆಡ್ ತಂಡ 3-1 ಅಂತರದ ಗೆಲುವು ಸಾಧಿಸಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.