ಫುಟ್ಬಾಲ್ ಕ್ರೀಡಾಂಗಣದ ಛಾವಣಿ ಕೆಳಪದರ ಕುಸಿದು ಗಾಯ
ಬೆಂಗಳೂರು: ಫುಟ್ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ಐ ಲೀಗ್ ಪಂದ್ಯಗಳು ನಡೆಯುವ ವೇಳೆ ಕ್ರೀಡಾಂಗಣದ ಮೇಲ್ಛಾವಣಿಯ ಕೆಲ ಪದರ ಕುಸಿದ ಕಾರಣ, ನಾಗಪ್ಪ ಎಂಬ ಮಾಜಿ ಪುಟ್ಬಾಲ್ ಆಟಗಾರ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಪಂದ್ಯ ವೀಕ್ಷಿಸುತ್ತಿದ್ದ ವೇಳೆ, ನಾಗಪ್ಪ ಅವರ ಮೇಲೆ ಮೇಲ್ಛಾವಣಿಯ ಸುಮಾರು 6 ಇಂಚು ಉದ್ದ, 10 ಇಂಚು ಅಗಲದ ಸಿಮೆಂಟ್‌ನ ಕೆಳಪದರ ತಲೆ ಮೇಲೆ ಬಿದ್ದು ರಕ್ತಸ್ರಾವವಾಯಿತು. ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ಕ್ರೀಡಾಂಗಣದಲ್ಲಿದ್ದ ಎಚ್‌ಎಎಲ್ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಲಾಯಿತು.
ನಿರ್ಲಕ್ಷ್ಯತೆ: ನಗರದ ಫುಟ್ಬಾಲ್ ಕ್ರೀಡಾಂಗಣದ ಮೇಲ್ಛಾವಣಿ ನಿರ್ಮಾಣವಾಗಿ ಸುಮಾರು 30 ವರ್ಷಗಳು ಕಳೆದಿದ್ದು, ಹಂತಹಂತವಾಗಿ ಅದು ಶಿಥಿಲಾವಸ್ಥೆಗೆ ತಲುಪುತ್ತಿದೆ. ಈ ಹಿಂದೆಯೂ ಅಲ್ಲಲ್ಲಿ, ಛಾವಣಿಯ ಕೆಳ ಪದರಿನ ಭಾಗಗಳು ಉದುರಿದ್ದವು. ಆದರೆ, ರಾಜ್ಯ ಫುಟ್ಬಾಲ್ ಸಂಸ್ಥೆ ಇದರಿಂದ ಎಚ್ಚೆತ್ತುಕೊಳ್ಳಲಿಲ್ಲ. ಛಾವಣಿಯ ದುರಸ್ಥಿಗೆ ಮನಸ್ಸು ಮಾಡಲಿಲ್ಲ. ಸಂಸ್ಥೆಯ ಈ ನಿರ್ಲಕ್ಷ್ಯ ಧೋರಣೆಯಿಂದಾಗಿಯೇ ಗುರುವಾರ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.