ಮಿಯಾಮಿ ಮಾಸ್ಟರ್ಸ್: ದ್ವಿತೀಯ ಸುತ್ತಿಗೆ ಸೋಮ್ದೇವ್
ಮಿಯಾಮಿ: ಭುಜದ ಶಸ್ತ್ರ ಚಿಕಿತ್ಸೆಯ ನಂತರ ಮತ್ತೆ ಕಣಕ್ಕೆ ಮರಳಿರುವ ಸೋಮ್ದೇವ್ ತಮ್ಮ ಉತ್ತಮ ಲಯವನ್ನು ಕಂಡುಕೊಂಡಿದ್ದು, ಇಲ್ಲಿ ನಡೆಯುತ್ತಿರುವ ಎಟಿಪಿ ಮಿಯಾಮಿ ಮಾಸ್ಟರ್ಸ್ನ ಮೊದಲ ಸುತ್ತಿನಲ್ಲಿ ರಷ್ಯಾದ ಎವ್ಗೆನಿ ಡೊಂಸ್ಕೊಯ್ ವಿರುದ್ಧ ಜಯಗಳಿಸಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 254ನೇ ರ್ಯಾಂಕಿಂಗ್ನ ಭಾರತದ ಸೋಮ್ದೇವ್ ಎವ್ಗೆನಿ ಡೊಂಸ್ಕೊಯ್ ವಿರುದ್ಧ 4-7, 7-6(5), 6-2 ಅಂತರದಿಂದ ಮಣಿಸಿದ್ದಾರೆ. ಸೋಮ್ದೇವ್ ತಮ್ಮ ಮುಂದಿನ ಸುತ್ತಿನಲ್ಲಿ ವಿಶ್ವದ 34ನೇ ರ್ಯಾಂಕಿಂಗ್ನ ಸ್ಪೇನ್ನ ಫೆಲಿಸಿಯಾನೊ ಲೊಪೆಜ್ ಅವರನ್ನು ಎದುರಿಸಲಿದ್ದಾರೆ.
ಲೊಪೆಜ್ ತಮ್ಮ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರಿಂದ ನೇರವಾಗಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದರು. ಈ ಋತುವಿನಲ್ಲಿ ಮತ್ತೆ ಕಣಕ್ಕಿಳಿದಿರುವ ಸೋಮ್ದೇವ್ ಅನೇಕ ಅಗ್ರ 100 ರ್ಯಾಂಕಿಂಗ್ ಆಟಗಾರರನ್ನು ಮಣಿಸಿದ್ದಾರೆ. 39ನೇ ರ್ಯಾಂಕಿಂಗ್ನ ಬೆನೊಟ್ ಪೈರ್ ಹಾಗೂ 78ನೇ ರ್ಯಾಂಕಿಂಗ್ನ ಬ್ಜೋರ್ನ್ ಪಾವ್ ಅವರ ವಿರುದ್ಧದ ಜಯ ಸ್ಮರಣೀಯವಾದುದು.
ಇನ್ನು ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಮತ್ತು ಮಾಕಲ್ ಲೊಡ್ರಾ ಜೋಡಿಯು ಕಾಸ್ ಕ್ರಿಸ್ಟೋಫರ್ ಮತ್ತು ಫಿಲಿಪ್ ಕೋಲ್ಸ್ಕೇರ್ ಜೋಡಿಯನ್ನು ಎದುರಿಸುವ ಮೂಲಕ ತಮ್ಮ ಹೋರಾಟ ಆರಂಭಿಸಲಿದ್ದಾರೆ.
ರೋಹನ್ ಬೊಪ್ಪಣ್ಣ ಹಾಗೂ ರಾಜೀವ್ ರಾಮ್ ಜೋಡಿ ತಮ್ಮ ಮೊದಲ ಸುತ್ತಿನಲ್ಲಿ ಎರಿಕ್ ಬುಟಾರ್ಕ್ ಮತ್ತು ಪೌಲ್ ಹ್ಯಾನ್ಲಿ ಅವರನ್ನು ಎದುರಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.