ಇಂದು ಬಿಸಿಐಸಿ ಗಾಲ್ಫ್
ಬೆಂಗಳೂರು: ಕಳೆದ ಎರಡು ವರ್ಷದಿಂದ ಆಯೋಜಿಸಲಾಗುತ್ತಿರುವ ಬಿಸಿಐಸಿ ಕಾರ್ಪೊರೇಟ್ ಗಾಲ್ಫ್ ಪಂದ್ಯಾವಳಿಯು ಬೆಂಗಳೂರಿನ ಪ್ರಮುಖ ಕ್ರೀಡಾ ಪಂದ್ಯಾವಳಿಯಾಗಿ ಬಿಂಬಿತವಾಗಿದ್ದು, ಈ ಪಂದ್ಯಾವಳಿಯ 3ನೇ ಆವೃತ್ತಿಯು ಶನಿವಾರ ನಗರದ ರಾಜ್ಯ ಗಾಲ್ಫ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದು ದಿನ ನಡೆಯಲಿರುವ ಪಂದ್ಯಾವಳಿಯನ್ನು ಬೆಂಗಳೂರು ಕೈಗಾರಿಕೆ ಹಾಗೂ ವಾಣಿಜ್ಯ ಮಂಡಳಿ (ಬಿಸಿಐಸಿ), ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಆಯೋಜಿಸಿದೆ. ಪಂದ್ಯಾವಳಿಯಲ್ಲಿ ಬಿಸಿಐಸಿನ ಸದಸ್ಯರು ಹಾಗೂ ವಾಣಿಜ್ಯ ವಲಯದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬಿಸಿಐಸಿ ತಿಳಿಸಿದೆ. ಗಾಲ್ಫ್ ಕ್ರೀಡೆ ಪ್ರತಿಯೊಬ್ಬರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು, ಒತ್ತಡವನ್ನು ನಿಭಾಯಿಸಲು, ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು, ಸವಾಲುಗಳನ್ನು ನಿಭಾಯಿಸಲು ತಂತ್ರ, ಯೋಜನೆ ರೂಪಿಸಲು ಸಹಕರಿಸುತ್ತದೆ ಎಂಬುದನ್ನು ಬಿಸಿಐಸಿ ನಂಬಿದೆ. ಈ ಎಲ್ಲಾ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಸಂಸ್ಥೆಯ ಎಲ್ಲಾ ಸದಸ್ಯರು ಒಂದೆಡೆ ಸೇರಿ ಈ ವೇದಿಕೆಯನ್ನು ಉಪಯೋಗಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಬಿಸಿಐಸಿ ತಿಳಿಸಿದೆ.ಬಿಸಿಐಸಿಯ ಕಾರ್ಪೊರೇಟ್ ಗಾಲ್ಫ್ ಪಂದ್ಯಾವಳಿಯ ಕಳೆದ ಎರಡು ಆವೃತ್ತಿಯು ನಗರದಲ್ಲಿನ ಕಾರ್ಪೊರೇಟ್ ವಲಯದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಬಿಸಿಐಸಿ ತಿಳಿಸಿದೆ.
ಇದರ ಜತೆಗೆ ಈ ಬಾರಿಯ ಪಂದ್ಯಾವಳಿಯಲ್ಲಿ ಕ್ರಿಕೆಟ್‌ನ ದಂತಕತೆಗಳಾದ ಗುಂಡಪ್ಪ ವಿಶ್ವನಾಥ್, ರೊಜರ್ ಬಿನ್ನಿ, ಸೈಯದ್ ಕಿರ್ಮಾನಿ ಮತ್ತು ಪ್ರಸನ್ನ ಅವರು ಭಾಗವಹಿಸಲಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.