ಕಿರಿಯ ವೇಟ್ ಲಿಫ್ಟರ್ ಅಮಾನತು
ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕಿರಿಯ ಮಹಿಳಾ ವೇಟ್ಲಿಫ್ಟರ್ಗಳು ಅಪಾಧಿಸಿದ ಹಿನ್ನಲೆಯಲ್ಲಿ 19 ವರ್ಷದ ಶುಭಂ ವರ್ಮಾ ಎಂಬ ವೇಟ್ಲಿಫ್ಟರ್ ಅನ್ನು ಭಾರತೀಯ ವೇಟ್ಲಿಫ್ಟಿಂಗ್ ಸಂಸ್ಥೆ ಅಮಾನತು ಮಾಡಿದೆ. ಕಳೆದ ನವೆಂಬರ್ನಲ್ಲಿ ನಡೆದ ರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಶುಭಂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು 3 ಕಿರಿಯ ಮಹಿಳಾ ವೇಟ್ಲಿಫ್ಟರ್ಗಳು ಆರೋಪಿಸಿದ್ದರು. ವರ್ಮಾ ಲೈಂಗಿಕ ದೃಷ್ಠಿಯಿಂದ ನೋಡುವುದು, ಅನಾವಶ್ಯಕವಾಗಿ ಫೋನ್ ಕರೆಗಳು ಹಾಗೂ ಮೆಸೇಜ್ ಮಾಡುತ್ತಿರುವುದಾಗಿ ಆರೋಪಿಸಿದ್ದರು. ಈ ವಿಷಯ ಕುರಿತು ಲಿಖಿತ ರೂಪದಲ್ಲಿ ವರ್ಮಾ ವಿರುದ್ಧ ತರಬೇತುದಾರರಿಗೆ ದೂರು ನೀಡಿದ ಕಿರಿಯ ವೇಟ್ಲಿಫ್ಟರ್ಗಳು, ಆತನ ದೂರವಾಣಿ ಕರೆಗಳ ವಿವರಣೆಯನ್ನು ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.