ಕೋಟ್ಲಾ ಪಿಚ್ ಬಗ್ಗೆ ಟೀಕೆ
ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಹಾಗೂ ಅಂತಿಮ ಪಂದ್ಯಕ್ಕೆ ನೀಡಲಾಗಿರುವ ಫಿರೋಜ್ ಶಾ ಕೋಟ್ಲಾ ಪಿಚ್ಗೆ ಭಾರಿ ಟೀಕೆಗಳು ವ್ಯಕ್ತವಾಗಿದ್ದು, ಮಾಜಿ ಆಟಗಾರರು ಈ ಪಿಚ್ ಅನ್ನು 'ಮೂರು ದಿನಗಳ ಪಿಚ್' ಎಂದು ಕರೆದಿದ್ದಾರೆ.ಈ ಪಿಚ್ನಲ್ಲಿ ಬಿರುಕುಗಳಿವೆ. ಕೆಲವು ಎಸೆತಗಳು ಕೆಳ ಮಟ್ಟದಲ್ಲಿ ಪುಟಿತವಾಗುತ್ತಿದ್ದು, ಓಲ್ಡ್ ಕ್ಲಬ್ ಪೆವಿಲಿಯನ್ ಕಡೆಯಿಂದ ಇಶಾಂತ್ ಶರ್ಮಾ ಎಸೆದ ಕೆಲವು ಎಸೆತಗಳು ಹೆಚ್ಚಿನ ಪುಟಿತ ಪಡೆದಿವೆ. ಈ ಪಿಚ್ ಈ ಹಿಂದಿನಂತೆ ನಿಧಾನ ಗತಿಯ ಪಿಚ್ ಆಗಿದ್ದು, ಪಂದ್ಯ ಸಾಗುತ್ತಿದ್ದಂತೆ ಹೆಚ್ಚಿನ ತಿರುವು ಪಡೆಯಲಿದೆ. ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ವೀಕ್ಷಕ ವಿವರಣೆ ನೀಡುವಾಗ ಈ ಪಿಚ್ ಅನ್ನು ಮೂರು ದಿನಗಳ ಪಿಚ್ ಎಂದು ಕರೆದರು. ಇವರ ಜತೆಗೆ ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಕೂಡ ಆರಂಭದಲ್ಲಿ ಇದು ಮೂರು ದಿನಗಳ ಪಿಚ್ ಎಂದು ತಿಳಿಸಿದ್ದು, ನಂತರ ಪಿಚ್ನ ಸ್ವಭಾವದ ಬಗ್ಗೆ ಈಗಲೇ ಊಹಿಸಲು ಸಾಧ್ಯವಿಲ್ಲ, ಪಂದ್ಯಾ ಸಾಗಿದಂತೆ ಪಿಚ್ ಹೆಚ್ಚು ತಿರುವು ನೀಡಲಿದೆ ಎಂದು ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.