ತಂಡಕ್ಕೆ ಮರಳಿದ ಉತ್ತಪ್ಪ
ಕ.ಪ್ರ.ವಾರ್ತೆ ಬೆಂಗಳೂರು ಮಾ.22-
ಪ್ರಸಕ್ತ ಸಾಲಿನ ಸೈಯದ್ ಮುಷ್ತಾಕ್ ಅಲಿ ದಕ್ಷಿಣ ವಲಯದ ಪಂದ್ಯಾವಳಿಗೆ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರಾಬಿನ್ ಉತ್ತಪ್ಪ ಈಗ ಗುಣಮುಖರಾಗಿದ್ದು, ಮಾ.25 ರಿಂದ ಆರಂಭವಾಗಲಿರುವ ನಾಕೌಟ್ ಹಂತದ ವೇಳೆ ತಂಡಕ್ಕೆ ಮರಳಲಿದ್ದಾರೆ.
ಅಂತರ್ ವಿಶ್ವವಿದ್ಯಾಲಯ ಟಿ20 ಪಂದ್ಯಾವಳಿಯಲ್ಲಿ ಮಿಂಚಿದ್ದ ಕೌನೆಯಾನ್ ಅಬ್ಬಾಸ್ ಬದಲಿಗೆ ಉತ್ತಪ್ಪ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಉಳಿದಂತೆ ಎಡಗೈ ಸ್ಪಿನ್ನರ್ ಕೆ.ಪಿ ಅಪ್ಪಣ್ಣ ಹಾಗೂ ವೇಗಿ ಎಚ್.ಎಸ್ ಶರತ್ ಗಾಯದ ಸಮಸ್ಯೆಗೆ ಒಳಗಾಗಿರುವುದರಿಂದ ತಂಡದ ಆಯ್ಕೆ ವೇಳೆ ಅವರನ್ನು ಪರಿಗಣಿಸಲಿಲ್ಲ.
ತಂಡ: ಆರ್.ವಿನಯ್ ಕುಮಾರ್ (ನಾಯಕ), ಸ್ಟುವರ್ಟ್ ಬಿನ್ನಿ (ಉಪ ನಾಯಕ), ರಾಬಿನ್ ಉತ್ತಪ್ಪ, ಮನಿಶ್ ಪಾಂಡೆ, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಕರುಣ್ ನಾಯರ್, ಸಿ.ಎಂ ಗೌತಮ್, ಅಮಿತ್ ವರ್ಮಾ, ಅಭಿಮನ್ಯು ಮಿಥುನ್, ಎಸ್.ಎಲ್ ಅಕ್ಷಯ್, ರೊನಿತ್ ಮೊರೆ, ಕೆ.ಗೌತಮ್, ಕುನಾಲ್ ಕಪೂರ್, ಜೆ.ಸುಚಿತ್
ಜೆ.ಅರುಣ್ಕುಮಾರ್ (ಬ್ಯಾಟಿಂಗ್ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶರವಣ್ (ಫಿಸಿಯೋ), ವಿವೇಕ್ ರಾಮಕೃಷ್ಣನ್ (ದೈಹಿಕ ತರಬೇತುದಾರ), ಸಂತೋಷ್ (ವಿಡಿಯೋ ವಿಶ್ಲೇಷಕ), ಸಂಜಯ್ ದೇಸಾಯ್ (ಮ್ಯಾನೇಜರ್).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.