ಮುಂಬೈಗೆ ಜಯ
ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಶುಕ್ರವಾರದ ಪಂದ್ಯದಲ್ಲಿ ಮುಂಬೈ ಟೈಗರ್ಸ್ ತಂಡ ಸೌಥ್ ಯುನೈಟೆಡ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಪಂದ್ಯದ 15ನೇ ನಿಮಿಷದಲ್ಲಿ ಸುನಿಲ್ ಕುಮಾರ್, 39ನೇ ನಿಮಿಷದಲ್ಲಿ ಮೊಹ್ಮದ್ ರಫಿ ಹಾಗೂ 74ನೇ ನಿಮಿಷದಲ್ಲಿ ಬಿಕಾಶ್ ಜೈರು ಮುಂಬೈ ಪರ ಗೋಲು ದಾಖಲಿಸಿದರು. ಇನ್ನು ದಿನದ ಇನ್ನೊಂದು ಪಂದ್ಯದಲ್ಲಿ ಕೋಲ್ಕತಾ ಸದರ್ನ್ ಸಮಿತಿ ತಂಡ ಹಿಂದುಸ್ತಾನ್ ಎಫ್ಸಿ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿತು. ಸದರ್ನ್ ಸಮಿತಿ ಪರ ಪಂದ್ಯದ 48ನೇ ನಿಮಿಷದಲ್ಲಿ ಸೂರಜ್ ಮೊಂಡಾಲ್ ಮತ್ತು 71ನೇ ನಿಮಿಷದಲ್ಲಿ ಡೇವಿಡ್ ಕೆಸಿ ನೈಹ್ತೆ ಗೋಲು ದಾಖಲಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.