ಅರ್ಹತಾ ಸುತ್ತಿನಲ್ಲಿ ಸುಟಿಲ್ಗೆ 10ನೇ ಸ್ಥಾನ
ಸೆಪಾಂಗ್: ಭಾನುವಾರ ನಡೆಯಲಿರುವ ಮಲೇಷ್ಯಾ ಎಫ್ 1 ರೇಸ್ಗಾಗಿ ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಭಾರತದ ಸಹರಾ ಫೋರ್ಸ್ ಇಂಡಿಯಾ ತಂಡದ ಕ್ರೀಡಾಳುಗಳಾದ ಆ್ಯಂಡ್ರಿಯನ್ ಸುಟಿಲ್ ಹಾಗೂ ಪೌಲ್ ಡಿ ರೆಸ್ತಾ ಕ್ರಮವಾಗಿ, 8ನೇ ಹಾಗೂ 15ನೇ ಸ್ಥಾನ ಪಡೆದಿದ್ದಾರೆ. ಭಾನುವಾರ ನಡೆಯುವ ರೇಸ್ನಲ್ಲಿ ಅವರು ಇದೇ ಸ್ಥಾನಗಳಿಂದ ಸ್ಪರ್ಧೆಗಿಳಿಯಲಿದ್ದಾರೆ. ಕಳೆದ ವಾರ ನಡೆದಿದ್ದ ವರ್ಷದ ಮೊಟ್ಟ ಮೊದಲ ರೇಸ್ ಆದ ಆಸ್ಟ್ರೇಲಿಯನ್ ಜಿಪಿಯಲ್ಲಿ ಸುಟಿಲ್ ಹಾಗೂ ರೆಸ್ತಾ ಅವರು ಕ್ರಮವಾಗಿ 6ನೇ ಹಾಗೂ 7ನೇ ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ್ದರು. ಇನ್ನುಳಿದಂತೆ, ಶನಿವಾರದ ಅರ್ಹತಾ ಸುತ್ತಿನಲ್ಲಿ, ಸೆಬಾಸ್ಟಿಯನ್ ವೆಟ್ಟಲ್ ಪೋಲ್ ಪೊಸಿಷನ್ ಗೆದ್ದಿದ್ದಾರೆ. ಫೆಲಿಪೆ ಮಸ್ಸಾ 2ನೇ, ಫರ್ನಾಂಡೊ ಅಲಾನ್ಸೊ 3ನೇ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.